ಶಂಕರನಾರಾಯಣ ಕಟ್ಟಕೋಡಿ ನಿಧನ

0

ಅರಂತೋಡು ಗ್ರಾಮದ ಕಟ್ಟಕೋಡಿ ನಿವಾಸಿ ಶಂಕರನಾರಾಯಣ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಸೆ.17 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಇವರು ಬಾಜಿನಡ್ಕ ಆದಿಮೊಗೇರ್ಕಳ ದೈವಸ್ಥಾನದ ಗೌರವಾಧ್ಯಕ್ಷರಾಗಿದ್ದು, ಅಭಿವೃದ್ಧಿ ಕಾರ್ಯದಲ್ಲಿ ಶ್ರಮಿಸಿದವರು. ಅರಂತೋಡು, ತೊಡಿಕಾನ, ಸಂಪಾಜೆ ಮೊಗೇರ ಯುವ ವೇದಿಕೆಯ ಗೌರವ ಸಲಹೆಗಾರರಾಗಿದ್ದರು.

ಮೃತರು ಪತ್ನಿ ತಿಮ್ಮಕ್ಕ, ಪುತ್ರರಾದ ಪುರುಷೋತ್ತಮ, ಯತೀಶ, ತೇಜಕುಮಾರ ಹಾಗೂ ಸಹೋದರ, ಸಹೋದರಿಯರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.