ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾಗಿ ಪವನ್ ಪಲ್ಲತಡ್ಕ ಆಯ್ಕೆ

0

ಪ್ರ.ಕಾರ್ಯದರ್ಶಿ ಮುರಳಿ ನಳಿಯಾರು – ಕೋಶಾಧಿಕಾರಿ ಲೋಹಿತ್ ಬಾಳಿಕಳ

ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನೂತನ ಅಧ್ಯಕ್ಷರಾಗಿ ಪವನ್ ಪಲ್ಲತಡ್ಕ ಆಯ್ಕೆಯಾಗಿದ್ದಾರೆ.

ಸೆ.20ರಂದು ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಮಂಡಳಿಯ ಗೌರವಾಧ್ಯಕ್ಷರಾಗಿ ವಿಜಯ ಕುಮಾರ್ ಎಂದು ಉಬರಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮುರಳಿ ನಳಿಯಾರು, ಕೋಶಾಧಿಕಾರಿಯಾಗಿ ಲೋಹಿತ್ ಬಾಳಿಕಳ, ಉಪಾಧ್ಯಕ್ಷರಾಗಿ ದಯಾನಂದ ಪಾತಿಕಲ್ಲು, ವಿನುತಾ ಪಾತಿಕಲ್ಲು, ಜತೆ ಕಾರ್ಯದರ್ಶಿಯಾಗಿ ನಿತೀಶ್ ಎರ್ಮೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಜೇಶ್ ಹಿರಿಯಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಜನಾರ್ಧನ ನಾಗತೀರ್ಥ, ಮಾಧ್ಯಮ ಪ್ರತಿನಿಧಿಯಾಗಿ ಶಿವಪ್ರಸಾದ್ ಕೇರ್ಪಳ, ನಿರ್ದೇಶಕರುಗಳಾಗಿ ಸತೀಶ್ ಮೂಕಮಲೆ, ಸಂಜಯ್ ನೆಟ್ಟಾರು, ನಮಿತಾ ಹರ್ಲಡ್ಕ, ಗುರುರಾಜ್ ಅಜ್ಜಾವರ, ದಿನೇಶ್ ಹಾಲೆಮಜಲು, ರಾಜೀವಿ ಗೋಳ್ಯಾಡಿ, ಪ್ರಸಾದ್ ಕಾಟೂರು, ಕೀರ್ತನ್ ಮುರುಳ್ಯ,
ವಿನಯ ಬೆದ್ರುಪಣೆ, ಆದರ್ಶ ಚಿದ್ಗಲ್ ಆಯ್ಕೆಯಾದರು.