















ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಸಭೆ ಸೆ. 20ರಂದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀಮತಿ ಶಾರದಾ ಶೇಟ್ ಪ್ರಾರ್ಥಿಸಿದರು. ಕಾರ್ಯದರ್ಶಿ ಶ್ರೀಮತಿ ಅನಿತಾ ಸುತ್ತುಕೋಟೆ ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀಮತಿ ಚಂದ್ರಾಕ್ಷಿ ಜೆ. ರೈ ಲೆಕ್ಕಪತ್ರ ಮಂಡಿಸಿದರು.

ಶ್ರೀಮತಿ ಮಧುಮತಿ ಬೊಳ್ಳೂರು ಸ್ವಾಗತಿಸಿ, ಶ್ರೀಮತಿ ಪುಷ್ಪಾ ಮಾಣಿಬೆಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಸಲಾಯಿತು. ಶ್ರೀಮತಿ ಮಧುಮತಿ ಬೊಳ್ಳೂರು ಸ್ವಾಗತಿಸಿ, ಶ್ರೀಮತಿ ಪುಷ್ಪಾ ಮಾಣಿಬೆಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಸಲಾಯಿತು. 2025-27 ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಪುಷ್ಪಾ ಡಿ. ಪ್ರಸಾದ್ ಕಾನತ್ತೂರ್, ಉಪಾಧ್ಯಕ್ಷೆಯಾಗಿ ಶ್ರೀಮತಿ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಜಲಜಾಕ್ಷಿ ಮಹಾಬಲ, ಕಾರ್ಯದರ್ಶಿಯಾಗಿ ಶ್ರೀಮತಿ ಹೇಮಾ ವೇಣುಗೋಪಾಲ್ ಕಾರ್ಯತೋಡಿ, ಕೋಶಾಧಿಕಾರಿಯಾಗಿ ಶ್ರೀಮತಿ ಚಂದ್ರಾಕ್ಷಿ ಜೆ. ರೈ ಮತ್ತು ಗೌರವಾಧ್ಯಕ್ಷೆಯಾಗಿ ಮಾಜಿ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು ಆಯ್ಕೆಯಾದರು. ನಿರ್ದೇಶಕರಾಗಿ ಶ್ರೀಮತಿ ಉಷಾ ಎಂ. ಶಾಂತಿನಗರ, ಶ್ರೀಮತಿ ಚಂದ್ರಾವತಿ ಬದಿಕಾನ, ಶ್ರೀಮತಿ ಸ್ವಾತಿ ಗಿರೀಶ್, ಶ್ರೀಮತಿ ಅನಿತಾ ಸುತ್ತುಕೋಟೆ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಶ್ರೀಮತಿ ಹರಿಣಿ ಸದಾಶಿವ, ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ, ಶ್ರೀಮತಿ ಹರ್ಷ ಕರುಣಾಕರ, ಶ್ರೀಮತಿ ಪ್ರಪುಲ್ಲ ಪಿ. ರೈ ಮತ್ತು ಶ್ರೀಮತಿ ತ್ರಿವೇಣಿ ದಾಮ್ಲೆ ಆಯ್ಕೆಯಾದರು. ಸಭೆಯಲ್ಲಿ 2025-26 ನೇ ಸಾಲಿನ ಜಿಲ್ಲಾ ಒಕ್ಕೂಟ ಹಾಗೂ ತಾಲೂಕು ಒಕ್ಕೂಟದ ಮಾಜಿ ಅಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ ನೂತನ ಪದಾರ್ಥಗಳ ಆಯ್ಕೆ ಪ್ರಕ್ರಿಯೆ ನಡೆಸಿ ಪದಗ್ರಹಣ ನಡೆಸಿಕೊಟ್ಟರು.










