ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ ಜಾಲ್ಸೂರು ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸೆ. 19 ರಂದು ಅಡ್ಕಾರಿನ ಸಂಜೀವಿನಿ ಒಕ್ಕೂಟದ ಸಭಾಂಗಣದಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದ ಹೆಚ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಎನ್ ಆರ್ ಎಲ್ ಯಂ ವಲಯ ಮೇಲ್ವಿಚಾರಕ ಮಹೇಶ್, ಫಾರಂ ಮ್ಯಾನೇಜರ್ ಹೃತಿಕ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಹಾಗೂ ಎಲ್ಲಾ ಸಂಜೀವಿನಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
















ಸೌಮ್ಯ ಕದಿಕಡ್ಕ ಒಕ್ಕೂಟದ ವರದಿ, ಲೆಕ್ಕಾಚಾರ ವರದಿ ಮಂಡಿಸಿದರು. ಗೀತಾ ಗೋಪಿನಾಥ್ ಹಾಗೂ ಜಯಶ್ರೀ ಪ್ರಾರ್ಥಿಸಿದರು. ರಶ್ಮಿ ಕಾಳಮ್ಮನೆ ಸ್ವಾಗತಿಸಿ, ವಿಜಯ ಕಾಳಮ್ಮನೆ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ
ಸಂಜೀವಿನಿ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶುಭಲಕ್ಷ್ಮಿ, ಕಾರ್ಯದರ್ಶಿಯಾಗಿ ನಿರ್ಮಲ, ಉಪಾಧ್ಯಕ್ಷರಾಗಿ ರೇಖಾ, ಜತೆ ಕಾರ್ಯದರ್ಶಿಯಾಗಿ ಜಯಂತಿ, ಖಜಾಂಜಿಯಾಗಿ ವಸಂತಿ ಆಯ್ಕೆಯಾದರು.










