ಸೆ.20ರಂದು ಅಜ್ಜಾವರ ವಿವೇಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಹಸೈನಾರ್ ಹಾಜಿಗೋರಡ್ಕ ವಹಿಸಿದ್ದರು.
ಅಜ್ಜಾವರ ಗ್ರಾ.ಪಂ. ಸದಸ್ಯೆ ಶ್ರೀಮತಿ ಲೀಲಾ ಮನಮೋಹನ್ ರವರು ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿದರು.
ಬಿ.ಇ.ಒ. ಕಚೇರಿಯ ನಿವೃತ್ತ ಪ್ರಥಮ ದರ್ಜೆ ಸಹಾಯಕ ರತ್ನಾಕರ. ಕೆ, ಶ್ರೀಮತಿ ವೆರೊನಿಕಾ ಮಾಡ್ತಾ ಮುಖ್ಯೋಪಾಧ್ಯಾಯರು ವಿವೇಕ್ ಶಾಲೆ ಮತ್ತು ಶ್ರೀಮತಿ ಬಿಂದು ರೋಹಿತ್ ಇವರನ್ನು ಸನ್ಮಾನಿಸಲಾಯಿತು.















ಗೋಪಿನಾಥ .ಎಂ ಮುಖ್ಯೋಪಾಧ್ಯಾಯರು ಸ.ಪ್ರಾ.ಶಾಲೆ ಅಜ್ಞಾವರ ಮತ್ತು
ಶಿವಪ್ರಸಾದ್ ಶಿಕ್ಷಣಾಧಿಕಾರಿ ಕಛೇರಿ ಸುಳ್ಯ ಉಪಸ್ಥಿತರಿದ್ದರು.
ಪಿಟಿಎ ಕಮಿಟಿಯ ಅಧ್ಯಕ್ಷ ಹಮೀದ್ ಬಯಂಬು ರವರು ಸ್ವಾಗತಿಸಿ, ಕು.ಫಾರಿಸಾ ಗೋರಡ್ಕ ರವರು ನಿರೂಪಣೆ ಮಾಡಿದರು.










