ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ
ಸೆ. 26 ರಂದು ಶ್ರೀ ಲಲಿತ ಪಂಚಮಿ ದಿನದಂದು ವಿಶೇಷವಾಗಿ ಸಾಮೂಹಿಕ ಶ್ರೀ ದುರ್ಗಾ ಪೂಜೆ ಹಾಗೂ ಚಂಡಿಕಾ ಹೋಮವು ಜರುಗಲಿರುವುದು.
ಸಂಜೆ ಗಂಟೆ 6.00 ಕ್ಕೆ ಅರ್ಚಕರ ನೇತೃತ್ವದಲ್ಲಿ ಸಾನಿಧ್ಯದಲ್ಲಿ ದೀಪ ಪ್ರತಿಷ್ಠೆಯಾಗಿ ಸಂಕಲ್ಪ
ಸಹಿತ ಶ್ರೀದುರ್ಗಾಪೂಜೆಯು ಆರಂಭವಾಗಲಿರುವುದು.















ಬಳಿಕ ಸಂಕಲ್ಪ ಸಹಿತ ಶ್ರೀ ಚಂಡಿಕಾಹೋಮ ನಡೆಯಲಿದ್ದು ರಾತ್ರಿ ಚಂಡಿಕಾಹೋಮದ ಪೂರ್ಣಾಹುತಿಯಾಗಲಿದೆ.
ಬಳಿಕ ಸ್ಥಳೀಯ ಭಜಕರಿಂದ ಭಜನಾ ಕಾರ್ಯಕ್ರಮವು ನಡೆಯಲಿದೆ.
ರಾತ್ರಿ ಮಹಾಪೂಜೆಯ ನಂತರ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿರುವುದು. ವಿಶೇಷವಾಗಿ ರಾತ್ರಿ ಗಂಟೆ 7:30 ರಿಂದ ವಾಹನ ಪೂಜೆಯು ನಡೆಯಲಿದೆ.
ಶ್ರೀ ದುರ್ಗಾ ಪೂಜೆ ಹಾಗೂ ಶ್ರೀ ಚಂಡಿಕಾ ಹೋಮದ ಸೇವೆಯನ್ನು ಮಾಡಿಸುವ ಭಕ್ತಾದಿಗಳು ಸೇವಾ ರಶೀದಿ ಪಡೆದು ಸಂಕಲ್ಪದ ಸಮಯದಲ್ಲಿ ಸಾನಿಧ್ಯದಲ್ಲಿ ಉಪಸ್ಥಿತರಿರಬೇಕು ಎಂದು ಸಮಿತಿಯ ಗೌರವಾಧ್ಯಕ್ಷ ಶ್ರೀಪತಿ ಭಟ್ ರವರು ತಿಳಿಸಿದರು.










