ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಸೆ.21 ರಂದು ನಿಧನರಾದ ಮೀನಾಕ್ಷಿ ನೆಯ್ಯೋಣಿ ಇವರ ಮರಣ ಸಾಂತ್ವನ ನಿಧಿ ರೂ.10000/- ವನ್ನು ಪತಿ ಮಾಲಿಂಗ ಪಾಟಾಳಿಯವರಿಗೆ ಸಂಘದ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ ವಿತರಿಸಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ, ವಿಜಯಕುಮಾರ್ ಉಬರಡ್ಕ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು, ಮತ್ತಿತರರು ಉಪಸ್ಥಿತರಿದ್ದರು.