ಭಾರತೀಯ ಜನತಾ ಪಾರ್ಟಿ ಬೆಳ್ಳಾರೆ ಶಕ್ತಿ ಕೇಂದ್ರದ ವತಿಯಿಂದ ಅಭ್ಯಾಸ ವರ್ಗ ಬೆಳ್ಳಾರೆ ಸಿ. ಎ ಬ್ಯಾಂಕ್ ಸಭಾಭವನದಲ್ಲಿ ಸೆ. 21ರಂದು ನಡೆಯಿತು. ಪ್ರಶಿಕ್ಷಣ ವರ್ಗವನ್ನು ಹಿರಿಯರಾದ ಸುರೇಶ್ ಶೆಣೈ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಪಕ್ಷ ಸಂಘಟನೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಭ್ಯಾಸ ವರ್ಗ ನಡೆಯುತ್ತಿದೆ.
















ಇದರ ಪ್ರಯೋಜನವನ್ನು ಕಾರ್ಯಕರ್ತರು ಪಡೆದುಕೊಂಡು ಪಕ್ಷ ಸಂಘಟನೆ ಬಲಪಡಿಸಬೇಕು ಎಂದರು. ಕುಮಾರಿ ಇಂಚರಾ ಗಟ್ಟಿಗಾರು ಪ್ರಾರ್ಥಿಸಿದರು. ವೇದಿಕೆಯಲ್ಲಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಸುಳ್ಯ ಮಂಡಲ ಉಪಾಧ್ಯಕ್ಷರಾದ ಆರ್ .ಕೆ .ಭಟ್ ಕುರುಂಬುಡೇಲು, ಬೆಳ್ಳಾರೆ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಬೆಳ್ಳಾರೆ ಶಕ್ತಿ ಕೇಂದ್ರ ಪ್ರಮುಖ್ ದಿಲೀಪ್ ಗಟ್ಟಿಗಾರು ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಮೂರು ಅವಧಿಯಲ್ಲಿ ಪ್ರಶಿಕ್ಷಣ ವರ್ಗ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಅಪ್ಪಯ್ಯ ಮಣಿಯಾಣಿ,ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಹರೀಶ್ ಬಿಜತ್ರೆ, ಹಾಗೂ ಜಿಲ್ಲಾ ಅಭ್ಯಾಸ ವರ್ಗ ಸಂಚಾಲಕರಾದ ಚಂದ್ರಶೇಖರ ಬಪ್ಪಳಿಗೆ ವರ್ಗವನ್ನು ನಡೆಸಿಕೊಟ್ಟರು. ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ ವಹಿಸಿ ಮಾತನಾಡಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಪ್ರತೀ ಗ್ರಾಮದಲ್ಲಿ ಅಭ್ಯಾಸ ವರ್ಗ ನಡೆಸಬೇಕು ಅನ್ನುವ ಪಕ್ಷದ ಸೂಚನೆಯಂತೆ ಇಂದು ಬೆಳ್ಳಾರೆ ಶಕ್ತಿ ಕೇಂದ್ರದಲ್ಲಿ ಕಾರ್ಯಕ್ರಮ ನಡೆದಿದೆ. ಈ ಅಭ್ಯಾಸ ವರ್ಗದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನೀವೆಲ್ಲರೂ ಸೇರಿದ್ದೀರಿ ನಿಮಗೆ ಅಭಿನಂದನೆಗಳು ಎಂದರು.ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.ಇದನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರಾದ ನಮ್ಮ ಮೇಲಿದೆ. ಪಕ್ಷದ ಹಲವಾರು ಚಟುವಟಿಕೆಗಳು ನಿರಂತರ ನಡೆಯಬೇಕಾದರೆ ಇಂತಹ ಕಾರ್ಯಕರ್ತರ ವರ್ಗ ನಡೆಸುವುದು ಮುಖ್ಯ ಇದು ನಮ್ಮೆಲ್ಲರಿಗೂ ಪ್ರೇರಣೆಯಾಗಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರುಷ ಪೂರೈಸಿದ ಸಂಧರ್ಭದಲ್ಲಿ ಅಕ್ಟೋಬರ್ 2ರ ವಿಜಯ ದಶಮಿಯಂದು ಪ್ರತೀ ಮಂಡಲದಲ್ಲಿಯೂ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ ಎಂದರು. ವೇದಿಕೆಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷರಾದ ಆರ್ ಕೆ ಭಟ್ ಕುರುಂಬುಡೇಲು,ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಪ್ರ. ಕಾ ಅನೂಪ್ ಬಿಳಿಮಲೆ, ಜಿಲ್ಲಾ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ ಪನ್ನೆ,ದರ್ಖಾಸ್ತು ಬೂತ್ ಸಮಿತಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ಉಮಿಕ್ಕಳ ಅಧ್ಯಕ್ಷ ಲೋಕೇಶ್, ತಡಗಜೆ ಅಧ್ಯಕ್ಷ ಮುರಳಿಕೃಷ್ಣ, ಪನ್ನೆ ಅಧ್ಯಕ್ಷ ರಾಧಾಕೃಷ್ಣ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ, ಗ್ರಾಮ ಪಂಚಾಯತ್ ಸದಸ್ಯರುಗಳು, ಸುಳ್ಯ ಮಂಡಲ ಸಮಿತಿ ಸದಸ್ಯರು ಹಾಗೂ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸುಳ್ಯ ಮಂಡಲ ಸಮಿತಿ ಸದಸ್ಯರಾದ ವಸಂತ ಉಲ್ಲಾಸ್, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳು, ಎಲ್ಲಾ ಬೂತ್ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು ಸೇರಿ 131ಜನ ಉಪಸ್ಥಿತರಿದ್ದರು.ನೆಟ್ಟಾರು ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ಚಾವಡಿ ಬಾಗಿಲು ಸ್ವಾಗತಿಸಿದರು. ಬೆಳ್ಳಾರೆ ಶಕ್ತಿ ಕೇಂದ್ರ ಪ್ರಮುಖ್ ದಿಲೀಪ್ ಗಟ್ಟಿಗಾರು ನಿರೂಪಿಸಿ ಶೈಲೇಶ್ ನೆಟ್ಟಾರು ಧನ್ಯವಾದವಿತ್ತರು.










