ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳನ್ನೊಲಗೊಂಡ ಭ್ರಷ್ಟಾಚಾರ ವಿರುದ್ದ ಹೋರಾಟ ಕೂಗು ಎತ್ತಿಕೊಂಡು ತಳೆದ ನ್ಯಾಯಕ್ಕಾಗಿ ಹೋರಾಡೋಣ ಸಮಿತಿ ವತಿಯಿಂದ ಸೆ.25 ರಂದು ಕೊಲ್ಲಮೊಗ್ರು ಗ್ರಾ.ಪಂ ಎದುರು ಪ್ರತಿಭಟನೆ ನಡೆಯಲಿರುವುದಾಗಿ ತಿಳಿದು ಬಂದಿದೆ.















ಕೊಲ್ಲಮೊಗ್ರು ಗ್ರಾ.ಪಂ. ಸಿಬ್ಬಂದಿ ಕಳವು ಆರೋಪದ ಬಗ್ಗೆ ಪೊಲೀಸ್ ದೂರು ನೀಡದೆ ಸೂಕ್ತ ತನಿಖೆ ನಡೆಸದೆ ಗ್ರಾ.ಪಂ ಆಡಳಿತ ತಪ್ಪು ಎಸಗಿರುವ ಬಗ್ಗೆ ಹಾಗೂ ಕೊಲ್ಲಮೊಗ್ರು ಪೇಟೆಯ ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಾ ಗ್ರಾ.ಪಂ ಅಳವಡಿಸಿ ಸಾರ್ವಜನಿಕರ ಗೌಪ್ಯತೆ ಬಗ್ಗೆ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಪ್ರತಿಭಟನೆ ನಡೆಸುವುದಾಗಿ ಸಮಿತಿಯವರು ತಿಳಿಸಿದ್ದಾರೆ.









