ಗುತ್ತಿಗಾರಿನ ಮಹಾಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಸೆ.22 ರಂದು ಪಿ.ಸಿ. ಮಾರ್ಟ್ ಶುಭಾರಂಭಗೊಂಡಿದೆ.

ಮುಂಜಾನೆ ವಳಲಂಬೆಯ ಮಹಾಬಲೇಶ್ವರ ಭಟ್ ಅವರು ಗಣಪತಿ ಹವನ ನೆರವೇರಿಸಿದರು. ಬಳಿಕ ಸಂಸ್ಥೆಯನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ವೆಂಕಪ್ಪ ಕೇನಾಜೆ, ವರ್ತಕರಾದ ಎನ್.ಎಲ್ ಈಶ್ವರ ಮಾಸ್ತರ್, ಮಹಾಲಕ್ಷ್ಮಿ ಕಾಂಪ್ಲೆಕ್ಸ್ ನ ಮಾಲಕ ನವೀನ್ ಬಾಳುಗೋಡು ಉಪಸ್ಥಿತರಿದ್ದರು. ದೊಡ್ಡಣ್ಣ ಗೌಡ ಚಿಕ್ಮುಳಿ, ವಿಶ್ವನಾಥ ಬಿಳಿಮಲೆ, ಭರತ್ ಮುಂಡೋಡಿ, ಕೇಶವ ಹೊಸೋಳಿಕೆ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ ಮತ್ತಿತರರು ಭಾಗವಹಿಸಿದ್ದರು.
















ಅಂಗಡಿ ಮಾಲಕರುಗಳಾದ ಚಂದ್ರಶೇಖರ ಪುರ್ಲುಮಕ್ಕಿ ಮನೆಯವರಾದ ಶ್ರೀಮತಿ ಬೇಬಿ ಕುಮಾರಿ ಚಂದ್ರಶೇಖರ, ಕೀರ್ತನ್ ಪುರ್ಲುಮಕ್ಕಿ, ಜೀವನ್ ಪುರ್ಲುಮಕ್ಕಿ ಜತೆಗಿದ್ದರು.
ಅಂಗಡಿಯಲ್ಲಿ ಹಣ್ಣುಗಳು, ತರಕಾರಿಗಳು, ದಿನಸಿ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು, ಮನೆಬಳಕೆ ,ಸ್ಟೇಷನರಿ ವಸ್ತುಗಳು ಲಭ್ಯವಿದ್ದು ದಿನಸಿ ಮತ್ತು ಎಲ್ಲಾ ರೀತಿಯ ವಸ್ತುಗಳ ಸಂಪೂರ್ಣ ರಖಂ ಹಾಗೂ ಚಿಲ್ಲರೆ ವ್ಯಾಪಾರ ದೊರೆಯಲಿದೆ. ಶುಭಾರಂಭದ ಪ್ರಯುಕ್ತ ಪ್ರತಿಯೊಂದು 1000 ಮೇಲ್ಪಟ್ಟ ಖರೀದಿಯ ಮೇಲೆ ಕೂಪನ್ ಪಡೆಯಬಹುದಾಗಿದೆ.
ಅಲ್ಲದೆ ಆಯ್ಕೆ ಉತ್ಪನ್ನದ ಮೇಲೆ 0% ರಿಂದ 30% ವರೆಗೆ ರಿಯಾಯಿತಿಯೂ ಲಭ್ಯವಿದ್ದು, ವಿವಿಧ ಉಡುಗೊರೆಗಳನ್ನು ಇದೇ ಬರುವ ದೀಪಾವಳಿ ಸಂದರ್ಭ ಪಡೆಯಲು ಅವಕಾಶವಿದೆ ಎಂದು ಮಾಲಕರು ವಿವರಿಸಿದ್ದಾರೆ.










