ಬಳ್ಪ ಗ್ರಾಮದ ಕುಂಜತ್ತಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೆ. 22ರಂದು ಆರಂಭಗೊಂಡಿದ್ದು, ಅ. 1ರ ತನಕ ವಿಜೃಂಭಣೆಯಿಂದ ಜರಗಲಿದೆ.

ಸೆ. 22ರಂದು ಬೆಳಿಗ್ಗೆ ದ್ವಾದಶ ನಾರಿಕೇಳ ಗಣಪತಿ ಹೋಮ, ಚಂಡಿಕಾ ಹೋಮ, ಸುವಾಸಿನಿ ಆರಾಧನೆ, ರಾತ್ರಿ ದುರ್ಗಾಪೂಜೆ ನಡೆಯಿತು. ಸೆ. 25ರಂದು ಸಂಜೆ 5.30ರಿಂದ ಆಶ್ಲೇಷ ಬಲಿ, ದುರ್ಗಾಪೂಜೆ, ಸೆ. 26ರಂದು ಬೆಳಿಗ್ಗೆ ವನದುರ್ಗಾ ಹೋಮ ಪೂಜೆ, ಸೆ. 27ರಂದು ಬೆಳಿಗ್ಗೆ ನಾಗದೇವರಿಗೆ ಪಂಚಾಮೃತ ಅಭಿಷೇಕ, ತಂಬಿಲ, ಸಂಜೆ ಆಶ್ಲೇಷ ಬಲಿ ಪೂಜೆ ನಡೆಯಲಿದೆ. ಸೆ. 30ರಂದು ಸಾಮೂಹಿಕ ರಂಗಪೂಜೆ ನಡೆಯಲಿದೆ.















ಅ. 1ರಂದು ಬೆಳಿಗ್ಗೆ 7.30ಕ್ಕೆ ಕದಿರು ಕಟ್ಟುವುದು, ಮಧ್ಯಾಹ್ನ ಮಹಾನವಮಿ ಮಹೋತ್ಸವ, ನವಾನ್ನ ಭೋಜನ, ಅಕ್ಷರಾಭ್ಯಾಸ, ಸಂಜೆ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ನವರಾತ್ರಿಯ ಪ್ರತಿದಿನ ರಾತ್ರಿ ದುರ್ಗಾಪೂಜೆ, ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.










