ನಮ್ಮ ಸಂಪ್ರದಾಯ, ಆಚರಣೆಗಳ ಅರಿವಿದ್ದರೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುತ ಜೀವನ ಸಾಧ್ಯ -ವಿನಯ ವಿ. ಶೆಟ್ಟಿ
ನಿಂತಿಕಲ್ಲಿನ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಭಾರತೀಯ ಸಂಸ್ಕೃತಿ ಆಧಾರಿತ ಕಾರ್ಯಕ್ರಮ, ನಮ್ಮ ಸಂಸ್ಕೃತಿ ನಮ್ಮ ದಿನ, ಸೆ. 19ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.















ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯ ಗುರುಗಳಾದ ವಿನಯ ವಿ. ಶೆಟ್ಟಿ ಮಾತನಾಡಿ, ಭಾರತೀಯ ಸಂಸ್ಕೃತಿ ಅಗಾಧವಾದುದು. ಇದು ಕೇವಲ ನಂಬಿಕೆ ಮಾತ್ರ ಅಲ್ಲ. ವೈಜ್ಞಾನಿಕ ಸತ್ಯವೂ ಹೌದು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಮಾರಸ್ವಾಮಿ ಕೆ.ಎಸ್ ಮಾತನಾಡಿ, ನಮ್ಮ ಸಂಸ್ಕೃತಿಯ ವೈಶಿಷ್ಟ್ಯದ ಉಳಿವು ನಮ್ಮ ಯುವ ಜನಾಂಗದ ಕೈಯಲ್ಲಿದೆ ಎಂದರು. ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದರ್ಶನ ಪಟ್ಟಾಜೆ, ಉಪಾಧ್ಯಕ್ಷೆ ಶ್ರೀಮತಿ ಅನಿತಾ ಉಪಸ್ಥಿತರಿದ್ದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಸೌಮ್ಯ ಪಿ.ಬಿ ಸ್ವಾಗತಿಸಿ, ಗಣಕ ವಿಜ್ಞಾನ ಉಪನ್ಯಾಸಕಿ ಶ್ರೀಮತಿ ಅನುಷಾ ಕೆ.ಆರ್ ವಂದಿಸಿದರು. ಜೀವಶಾಸ್ತ್ರ ಉಪನ್ಯಾಸಕ ಜೀವನ್ ಎಸ್.ಎಚ್ ಪ್ರಶಸ್ತಿ ವಿಜೇತರ ವಿವರವನ್ನು ನೀಡಿದರು. ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಜ್ಯೋತ್ಸ್ನಾ ಎಂ.ಜೆ ಕಾರ್ಯಕ್ರಮ ನಿರೂಪಿಸಿದರು. ಮಮತಾ ಪ್ರಾರ್ಥಿಸಿದರು. ಮುಖ್ಯ ಅತಿಥಿಗಳಾದ ವಿನಯಾ ವಿ. ಶೆಟ್ಟಿಯವರಿಗೆ ಬಾಗಿನ ನೀಡಿ ಗೌರವಿಸಲಾಯಿತು. ಉಪನ್ಯಾಸಕರಾದ ಉಜ್ವಲ್ ಕೆ.ಎಚ್, ವೇದಾವತಿ, ಸಂಧ್ಯಾ, ಜಾಸ್ಮಿನ್, ಪ್ರಮೀಳಾ, ವಿಮಲ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ನಾಗೇಶ್ ರೈ ಮಾಳ, ಹಿರಿಯ ಶಿಕ್ಷಕಿ ಹೇಮಾವತಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಪೂರ್ವಾಧ್ಯಕ್ಷ ಬಾಲಕ್ರಷ್ಣ ರೈ ಪಾದೆಕಲ್ಲು ಉಪಸ್ಥಿತರಿದ್ದರು.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಪ್ಯಾಶನ್ ಶೋ ಭಾರತೀಯ ಸಂಸ್ಕೃತಿ ಬಿಂಬಿಸುವ ಸ್ಪರ್ಧೆಗಳು ಮಧ್ಯಾಹ್ನ ನೆಲದಲ್ಲಿ ಕುಳಿತು ಬಾಲೆ ಎಲೆಯಲ್ಲಿ ಭಾರತೀಯ ಪಾರಂಪರಿಕ ಶೈಲಿಯ ಭೋಜನ, ವಿದ್ಯಾರ್ಥಿನಿಯರು ಸೀರೆಯಲ್ಲಿ ಹಾಗೂ ವಿದ್ಯಾರ್ಥಿಗಳು ಬಿಳಿ ಪಂಚೆ ಹಾಗೂ ಅಂಗಿ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ವಿಶೇಷತೆಯಾಗಿತ್ತು.










