ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.21 ರಿಂದ ಪ್ರಾರಂಭಗೊಂಡಿದ್ದು ಅ.02 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.21 ರಂದು ರಾತ್ರಿ ಕ್ಷೇತ್ರದ ರಂಗಪೂಜೆ ನಡೆಯಿತು.

ಬಳಿಕ ಭಕ್ತಾದಿಗಳ ಸಾಮೂಹಿಕ ರಂಗಪೂಜೆ ನಡೆಯಿತು.
ರಾತ್ರಿ ಮಹಾಪೂಜೆ ನಡೆಯಿತು.
ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಪ್ರತೀ ದಿನ ಬೆಳಿಗ್ಗೆ ಗಂಟೆ 7.30 ಮಧ್ಯಾಹ್ನ 12.30 ರಾತ್ರಿ ಗಂಟೆ 7.30 ಕ್ಕೆ ಶ್ರೀ ದೇವರಿಗೆ ಪೂಜೆ ನಡೆಯುತ್ತಿದ್ದು ಸಾವಿರಾರು ಜನ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
















ಪ್ರತೀ ದಿನ ದೇವಸ್ಥಾನದಲ್ಲಿ ಬೆಳಿಗ್ಗೆ ಗಂಟೆ 11.00 ರಿಂದ ಮತ್ತು ಸಂಜೆ ಗಂಟೆ 6.00 ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ.
ಅ.2 ರಂದು ಗುರುವಾರ ಪೂರ್ವಾಹ್ನ ಗಂಟೆ 8.00 ರಿಂದ ಅಕ್ಷರಾಭ್ಯಾಸ ನಡೆಯಲಿದೆ.
ಭಕ್ತದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ಸಿ.ವಿ.ತಿಳಿಸಿದ್ದಾರೆ.










