ನಿಂತಿಕಲ್ಲು : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0


ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ (ರಿ )ಬೆಳ್ತಂಗಡಿ, ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನಿಂತಿಕಲ್ಲು ವಲಯ ಹಾಗೂ ಕೆ.ಎಸ್. ಗೌಡ ಕಾಲೇಜು ವರ್ಷನಗರ ನಿಂತಿಕಲ್ಲು ಇವರ ಸಹಕಾರದೊಂದಿಗೆ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೇಸೀ ತರಬೇತುದಾರ ಲೋಕೇಶ್ ಪೀರಣಮನೆ ಮನೆ ವಿದ್ಯಾರ್ಥಿ ಜೀವನದಲ್ಲಿ ದಾರಿತಪ್ಪುವ ಕಾರಣಗಳು, ಘಟನಾವಳಿಗಳು, ದುಶ್ಚಟಗಳಿಗೆ ಬಲಿ, ಮಾದಕ ವ್ಯಸನಗಳು ಮತ್ತು ಮಾರಣಾಂತಿಕ ರೋಗಗಳ ಬಗ್ಗೆ ತಿಳಿಸಿದರು. ಹದಿಹರೆಯದಲ್ಲಿನ ಒತ್ತಡಗಳು, ತಂದೆ ತಾಯಿಯ ಒತ್ತಡ ಸ್ನೇಹಿತರ ಒತ್ತಡ ಜೀವನ ಶೈಲಿ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಕಾರಾತ್ಮಕ ಚಿಂತನೆಗಳ ಬಗ್ಗೆ ತಿಳಿಸಿದರು. ಎಚ್ಚೆತ್ತುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.


ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ದಯಾನಂದ ಕೆಆರ್. ರವರು ಎಲ್ಲರನ್ನೂ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಶ್ರೀಮತಿ ಸವಿತಾ ಶೆಟ್ಟಿ ಯವರು ವಂದಿಸಿದರು.
ಕಾಲೇಜಿನ ಅಧ್ಯಾಪಕ ವೃಂದ, ನಿಂತಿಕಲ್ಲು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಲೀಲಾವತಿಯವರು ಉಪಸ್ಥಿತರಿದ್ದರು.