ಮಗುವಿಗೆ ಜನ್ಮ ನೀಡುತ್ತಿದ್ದಂತೆ ಯುವಕ ಜೈಲಿಗೆ















ಅಪ್ರಾಪ್ತೆ ಯುವತಿಯೊಬ್ಬಳನ್ನು ಗರ್ಭಿಣಿಯನ್ನಾಗಿಸಿದ ಯುವಕ ಜೈಲಿಗೆ ಹೋಗುತ್ತಿದ್ದಂತೆ ಇತ್ತ ಯುವತಿ ಮಗುವಿಗೆ ಜನ್ಮ ನೀಡಿದ ಘಟನೆ ಗುತ್ತಿಗಾರಿನಿಂದ ವರದಿಯಾಗಿದೆ.
ನಾಲ್ಕೂರು ಗ್ರಾಮದ ಕೋನೆಕಾನ ಎಂಬಲ್ಲಿಯ ಯುವತಿ ಗುತ್ತಿಗಾರಿನಲ್ಲಿ ರೂಂ ಪಡೆದು ವಾಸವಿದ್ದು, ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿಯ ಯುವಕನೊಬ್ಬ ಈಖೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಗರ್ಭವತಿಯನ್ನಾಗಿಸಿದ್ದ. ಯುವತಿಗೆ ಒಂಬತ್ತು ತಿಂಗಳಾಗುತ್ತಿದ್ದಂತೆ ಪ್ರಕರಣ ಬಯಲಿಗೆ ಬಂದಿದ್ದು, ಈ ಸಂಬಂಧ ಬಾಳುಗೋಡಿನ ಯುವಕನ ಬಂಧನವಾಗಿತ್ತು. ಪೋಕ್ಸೋ ಕಾಯ್ದೆಯಂತೆ ಯುವಕನಿಗೆ ಜೈಲಾಗಿದೆ. ಇತ್ತ ಯುವತಿಗೆ ತಿಂಗಳು ತುಂಬಿ ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿದುಬಂದಿದೆ.










