ತುಳು ಕೂಟ ಕುವೈಟ್ ವತಿಯಿಂದ ಅದರ ಬೆಳ್ಳಿ ಹಬ್ಬದ ಸ್ಮರಣಾರ್ಥ ಎಸ್.ಎಸ್.ಎಲ್.ಸಿ ಯಲ್ಲಿ ಸರಕಾರಿ ಶಾಲೆಯಲ್ಲಿ ಕಲಿತು ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗಾಗಿ ನೀಡುವ ವಿದ್ಯಾರ್ಥಿ ವೇತನವನ್ನು ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಎರಡನೇ ರ್ಯಾಂಕ್ ಗಳಿಸಿದ ವಿದ್ಯಾರ್ಥಿ ಸೃಜನಾದಿತ್ಯ ಶೀಲ ಮತ್ತು ಅಜ್ಜಾವರ ಸರಕಾರಿವಪ್ರೌಢಶಾಲೆಗೆ ಪ್ರಥಮ ಸ್ಥಾನಿಯಾದ ಮುಹಮ್ಮದ್ ಸಾಧಿಕ್ ರವರಿಗೆ
ರೂ.7500 ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.















ಸೃಜನಾದಿತ್ಯ ಶೀಲರವರಿಗೆ ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಕಿಶೋರ್ ಕುಮಾರ್ ಯು.ವಿ. ವಿತರಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿ ವೇತನಕ್ಕೆ ಶಿಫಾರಸ್ಸು ಮಾಡಿದ ನಿವೃತ್ತ ದೈಹಿಕ ಶಿಕ್ಷಕರಾದ ಬಾಲಕೃಷ್ಣ ನಾಯ್ಕ ಅಜ್ಜಾವರ, ವಿದ್ಯಾರ್ಥಿ ವೇತನದ ಆಯ್ಕೆಗೆ ಕಾರಣರಾದ ಕುವೈಟ್ ಉದ್ಯಮಿ ಇರ್ಫಾದ್ ಎ.ಬಿ ಪಲ್ಲತ್ತಡ್ಕರವರ ಸಹೋದರ ತಾಜುದ್ದೀನ್ ಎ.ಬಿ ಪಲ್ಲತ್ತಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸೂಪರಿಂಟೆಂಡೆಂಟ್ ಶಿವಪ್ರಸಾದ್ ಜಿ.ಎಸ್, ಶಿವಪ್ರಸಾದ್ ಕೆ.ವಿ, ಶಿಕ್ಷಣ ಸಂಯೋಜಕಿ ಸಂಧ್ಯಾಕುಮಾರಿ ಬಿ.ಎಸ್, ಕಛೇರಿ ಸಿಬ್ಬಂದಿಗಳಾದ ವಿಜೇತ್ ಎಂ.ಸಿ, ಯೋಗೀಶ್ ಭರತ್ ಹಾಗೂ ಸೋಮಶೇಖರ ಎಂ ಇವರು ಉಪಸ್ಥಿತರಿದ್ದರು.
ಮುಹಮ್ಮದ್ ಸಾಧಿಕ್ ರವರಿಗೆ ಇಂದು ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ
ಮುಖ್ಯ ಶಿಕ್ಷಕರಾದ ಗೋಪಿನಾಥ್ ಮೆತ್ತಡ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್ ಅಜ್ಜಾವರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಇರ್ಷಾದ್ ಎ.ಬಿ.ರವರ ಸಹೋದರ ತಾಜುದ್ದೀನ್ ಎ.ಬಿ.ಪಲ್ಲತ್ತಡ್ಕ, ಶಿಕ್ಷಕರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










