ಸುಳ್ಯ ಸೆಂಟರಿನಲ್ಲಿ ಶುಭಾರಂಭಗೊಂಡಿದೆ ಮೈ ಡ್ರೆಸ್ ಕೋಡ್ ಮೆನ್ಸ್ ರೆಡಿಮೇಡ್ ವೆಡ್ಡಿಂಗ್ ಸ್ಟುಡಿಯೋ

0

ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಂಬೊ ಆಫರ್ ಗಳು

ಖರೀದಿಸುವ ಪ್ರತಿಯೊಬ್ಬ
ಗ್ರಾಹಕರಿಗೂ ವಿಶೇಷ ಕೊಡುಗೆಗಳು

ಸುಳ್ಯದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದ ಸುಳ್ಯ ಸೆಂಟರ್ ನಲ್ಲಿ ಮೈ ಡ್ರೆಸ್ ಕೋಡ್ ರೆಡಿಮೇಡ್ ಮತ್ತು ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಸೆ.25ರಂದುಶುಭಾರಂಭಗೊಂಡಿತು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನಿರಬಿದಿರೆ ಯವರು ರಿಬ್ಬನ್ ಕತ್ತರಿಸಿ ಮಳಿಗೆಯನ್ನು ಉದ್ಘಾಟಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ ಯವರು ದೀಪ ಪ್ರಜ್ವಲಿಸಿ ಸಂಸ್ಥೆಗೆ ಶುಭ ಹಾರೈಸಿದರು.


ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ,
ಸೂಡಾ ಅಧ್ಯಕ್ಷ ಕೆ. ಎಂ. ಮುಸ್ತಾಫ, ಹಿರಿಯ ಉದ್ಯಮಿ ಶ್ರೀಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಆರಂಬೂರು, ಡಿ. ಜಿ ಪ್ಲಸ್ ಮಾಲಕ ಚಂದ್ರಶೇಖರ ನಂಜೆ ಉಪಸ್ಥಿತರಿದ್ದರು.
ಅರ್ಚಕ ಶಿವಪ್ರಸಾದ್ ಕೆಡಿಲಾಯ ರವರ ನೇತೃತ್ವದಲ್ಲಿ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು.
ಸಂಸ್ಥೆಯ ಮಾಲಕ ರಮೇಶ್ ರವರು ಸ್ವಾಗತಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂಧರ್ಭದಲ್ಲಿ ಮಾಲಕರ ತಂದೆ ತಾಯಿ ಹಾಗೂ ಸಹೋದರರು
ಹಾಗೂ ಬಂಧು ಮಿತ್ರರಿದ್ದರು.

ಪುರುಷರಿಗೆ ಮತ್ತು ಮಕ್ಕಳಿಗೆ ಬೇಕಾದ ಪ್ಯಾಂಟ್, ಶರ್ಟ್, ಶಾರ್ಟ್ ಕುರ್ತ, ಕುರ್ತಾ ಟಾಪ್, ಕುರ್ತಾ ಸೆಟ್, ಪೈಜಾಮ, ಸೂಟ್ಸ್, ಬ್ಲೇಜರ್, ಜೋದ್ ಪುರಿ, ಶೇರ್ವಾಣಿಗಳು ಮೆನ್ಸ್ ವೇರ್ ರೆಡಿಮೇಡ್ ಸ್ಟುಡಿಯೋದಲ್ಲಿರುವುದು.

ಪುರುಷರ ಹಾಗೂ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ರೆಡಿಮೇಡ್ ಬಟ್ಟೆ ಬರೆಗಳು ಹಾಗೂ ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ಆಕರ್ಷಣೀಯ ಉಡುಪು ಗಳು ಲಭ್ಯವಿದೆ. ಅಲ್ಲದೆ ಮಕ್ಕಳಿಗೆ ಸರಿ ಹೊಂದುವ ಉಡುಪುಗಳನ್ನು ಹೊಲಿದು ಕೊಡಲಾಗುವುದು.

ಪ್ರಸಿದ್ಧ ಬ್ರಾಂಡೆಡ್ ಕಂಪೆನಿ ಯ ಉತ್ತಮ ಗುಣ ಮಟ್ಟದ ಬಟ್ಟೆಗಳು ಕೈಗೆಟಕುವ ದರದಲ್ಲಿ ಲಭ್ಯವಿರುವುದು. ಸುಮಾರು 50 ಕ್ಕೂ ಹೆಚ್ಚು ಬ್ರಾಂಡ್ ಗಳು ಮಳಿಗೆಯಲ್ಲಿ ದೊರಕುವುದು. ಯುವಕರ ಕಣ್ಮನ ಸೆಳೆಯುವ ಆಕರ್ಷಕ ಬಟ್ಟೆ ಬರೆಗಳು ನಿಮಗೆ ಒಪ್ಪುವ ರೀತಿಯಲ್ಲಿ ಕ್ಲಪ್ತ ಸಮಯದಲ್ಲಿ ನುರಿತ ಟೈಲರ್ ರವರು ಸ್ಟಿಚ್ ಮಾಡಿ ಕೊಡುವ ವ್ಯವಸ್ಥೆ ನೂತನ ಮಳಿಗೆಯಲ್ಲಿ ಇರುವುದು.


ದಸರಾ ಆಫರ್:
ವಿಶೇಷವಾಗಿ ದಸರಾ ಹಬ್ಬದ ಪ್ರಯುಕ್ತ ವಿಶೇಷ ಕೊಂಬೊ ಆಫರ್ ಗಳು, ಫಾರ್ಮಲ್ ಕೊಂಬೊ @ 649/-, ಕ್ಯಾಶುವಲ್ ಕೊಂಬೊ @799/-, ಪೋಲೊ ಟೀ ಶರ್ಟ್ಸ್ 3 ಖರೀದಿಗೆ @ 899/-, 3 ಶರ್ಟ್ ಖರೀದಿಗೆ @ 999/- ಕ್ಕೆ ನೀಡಲಾಗುವುದು. ಮಳಿಗೆಗೆ ಭೇಟಿ ನೀಡಿ ಖರೀದಿ ಮಾಡುವ ಪ್ರತಿಯೊಬ್ಬ ಗ್ರಾಹಕರಿಗೆ ಆಕರ್ಷಕ ಉಚಿತ ಉಡುಗೊರೆ ನೀಡಲಾಗುವುದು
ಎಂದು ಮಾಲಕರು ತಿಳಿಸಿದರು.