ಸುಳ್ಯ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆರು ಮಂದಿ ಶಿಕ್ಷಕರಿಗೆ ರೋಟರಿ ನೇಶನಲ್ ಬಿಲ್ಡರ್ ಅವಾರ್ಡ್ ನೀಡಿ ಗೌರವಿಸಲಾಯಿತು.















ದೇವಚಳ್ಳ ಸ.ಹಿ.ಪ್ರಾ. ಶಾಲೆಯ ಜೀವನ್ ಕುಮಾರ್ ಟಿ., ಕರಿಕ್ಕಳ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಶ್ರೀಮತಿ ಜಯಶ್ರೀ, ಪಾಟಾಜೆ ಸ.ಕಿ.ಪ್ರಾ.ಶಾಲೆಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಪಿ., ಬಳ್ಪ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಶ್ರೀಮತಿ ಲೋಲಾಕ್ಷಿ, ದೇರಾಜೆ ಸ.ಕಿ.ಪ್ರಾ.ಶಾಲೆಯ ಶಿಕ್ಷಕಿ ಅಶ್ವಿನಿ ಎನ್., ಗಾಂಧಿನಗರ ಕೆಪಿಎಸ್ ನ ಶಿಕ್ಷಕಿ ಶ್ರೀಮತಿ ಸುಜಾತ ಪಿ. ಯವರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ಡಾ. ರಾಮಮೋಹನ್ ವಹಿಸಿ, ಶಿಕ್ಷಕರ ಸೇವೆಯ ಕುರಿತು ಮಾತನಾಡಿದರು.
ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ., ಶ್ರೀಮತಿ ಲತಾ ಮಧುಸೂದನ್, ಕ್ಲಬ್ ಪೂರ್ವಾಧ್ಯಕ್ಷೆ ಯೋಗಿತಾ ಗೋಪಿನಾಥ್, ಕೋಶಾಧಿಕಾರಿ ಮಾಧವ ಬಿ.ಟಿ., ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ, ಡಾ.ಪುರುಷೋತ್ತಮ ಕಟ್ಟೆಮನೆ ವೇದಿಕೆಯಲ್ಲಿ ಇದ್ದರು.










