ಬಾಳುಗೋಡು, ಬೆಟ್ಟುಮಕ್ಕಿ ಪೊಯ್ಯೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 40 ನೇ ವರ್ಷದ ನವರಾತ್ರಿ ಪೂಜೆ ಕಾರ್ಯಕ್ರಮ

0

ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿ ಪೊಯ್ಯೆಗದ್ದೆ ಶ್ರೀ ದೇವಿಯ ಸನ್ನಿಧಿಯಲ್ಲಿ 40 ನೇ ವರ್ಷದ ನವರಾತ್ರಿ ಪೂಜೆ ಸೆ.22 ರಿಂದ ಆರಂಭಗೊಂಡಿದೆ.

ಸೆ.22 ರಂದು ಗಣಹೋಮ, ಶ್ರೀ ದೇವಿಯ ಗದ್ದಿಗೆ ಏರುವ ಕಾರ್ಯಕ್ರಮ ನಡೆದಿದೆ. ಅಂದು, ನಾಗ ತಂಬಿಲ ನಡೆದಿದ್ದು ರಾತ್ರಿ ದೇವಿ ಪೂಜೆ, ಭಜನಾ ಕಾರ್ಯಕ್ರಮ ನಡೆದು, ಅನ್ನಸಂತರ್ಪಣೆ ನಡೆಯಿತು. ಪ್ರತಿ ದಿನ ಶ್ರೀ ದೇವಿಯ ಪೂಜೆ ನಡೆಯುತಿದ್ದು ಸೆ.30 ರಂದು ಪೂರ್ವಾಹ್ನ ತಡೆಕಾಯಿ ಕೊಡುವ ಕಾರ್ಯಕ್ರಮ ನಡೆಯಲಿದ್ದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆದು ರಾತ್ರಿ ದುರ್ಗಾ ಪೂಜೆ ನಡೆಯಲಿದೆ.