ಸಾವಿರಾರು ಮಂದಿಗೆ ಅನ್ನಪ್ರಸಾದ ವಿತರಣೆ

ಗಾಂಧಿನಗರ ಜುಮಾ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಖಾಝಿಯಾಗಿ ಸೇವೆ ಸಲ್ಲಿಸಿದ್ದ ಸಯ್ಯಿದ್ ತಾಜುಲ್ ಉಲಮಾ ಅಬ್ದುಲ್ ರಹಿಮಾನ್ ಬುಖಾರಿ ತಂಙಳ್ ರವರ ಹೆಸರಿನಲ್ಲಿ ಮತ್ತು ಅಗಲಿದ ಸುನ್ನಿ ಉಲಾಮ ನಾಯಕರುಗಳಾದ ಸಂಶುಲ್ ಉಲಮಾ ತಂಙಳ್, ಮಹಾನ್ ಪಂಡಿತರಾದ ಕಣ್ಣಿಯತ್ ಉಸ್ತಾದ್, ಸಯ್ಯಿದ್ ಕೂರತ್ ತಂಙಳ್ ಮುಂತಾದ ಗಣ್ಯರ ಹೆಸರಿನಲ್ಲಿ ತಹಲೀಲ್ ಸಮರ್ಪಣೆ ಸೆ 26 ರಂದು ಜುಮಾ ಬಳಿಕ ಗಾಂಧಿನಗರ ಮಸೀದಿಯಲ್ಲಿ ನಡೆಯಿತು.
















ಸ್ಥಳೀಯ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ರವರು ಅಗಲಿದ ನೇತಾರರ ಅನುಷ್ಮರಣಾ ಭಾಷಣವನ್ನು ಮಾಡಿ ಬಳಿಕ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿಗೆ ಈ ಸಂದರ್ಭದಲ್ಲಿ ಅನ್ನಪ್ರಸಾದ ವಿತರಣೆ ನಡೆಯಿತು.
ಜಮಾಅತ್ ಕಮಿಟಿಯ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.










