ಉದ್ಘಾಟನೆ ಪ್ರಯುಕ್ತ ವಿಶೇಷ ರಿಯಾಯಿತಿ

ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು, ಆವಂತಿ ಕೆಫೆ ಹೋಟೆಲ್ ನ ಪಕ್ಕದ ಸ್ಕಂದ ಕಾಂಪ್ಲೆಕ್ಸ್ ನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ವಸ್ತ್ರ ಮಳಿಗೆ ಮಹಾಲಕ್ಷ್ಮಿ ಶೋರೂಂ ನವೀಕರಣಗೊಂಡು ಸೆ.27ರಂದು ಮುಂಜಾನೆ ಶುಭಾರಂಭಗೊಳ್ಳಲಿದೆ.

ಸೆ.27ರಂದು ಬೆಳಗ್ಗೆ 8.30ಕ್ಕೆ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ರವರು ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.















ಶಾಸಕಿ ಭಾಗೀರಥಿ ಮುರುಳ್ಯ, ಎ.ಒ. ಎಲ್.ಇ. ಪ್ರಧಾನ ಕಾರ್ಯದರ್ಶಿ
ಅಕ್ಷಯ್ ಕೆ.ಸಿ., ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಸ್ಕಂದ ಕಾಂಪ್ಲೆಕ್ಸ್ ಮಾಲಕ ವಾಸುದೇವ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಸುಳ್ಯ ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ಯಶ್ಚಿತ್ ಕಾಳಮ್ಮನೆ ಮುಖ್ಯ ಅತಿಥಿಗಳಾಗಿರುವರು.

11 ವರ್ಷಗಳ ಹಿಂದೆ ಸುಳ್ಯದಲ್ಲಿ ಆರಂಭಗೊಂಡ ಈ ಸಂಸ್ಥೆ ಇದುವರೆಗೆ ಮೊದಲ ಮಹಡಿಯ ಒಂದು ಕೊಠಡಿ ಯಲ್ಲಿ ಮಾತ್ರ ಗ್ರಾಹಕರಿಗೆ ಸೇವೆ ನೀಡು ತಿತ್ತು. ಇದೀಗ ಅದೇ ಕಾಂಪ್ಲೆಕ್ಸ್ ನ ಎರ ಡನೇ ಮಹಡಿಯನ್ನು ಸೇರಿಸಿಕೊಂಡು ಮಳಿಗೆಯನ್ನು ವಿಸ್ತ್ರತಮಳಿಗೆಯಾಗಿ ಮಾಡಲಾಗಿದೆ.










