ಅಡ್ಕಬಳೆ, ಬಾಜಿನಡ್ಕ, ಬನ, ಕರಿಂಬಿ ಭಾಗದಲ್ಲಿ ಬೀಸಿದ ಗಾಳಿ – ಅಪಾರ ಕೃಷಿ ನಾಶ

0

ಇಂದು ಬೆಳಿಗ್ಗೆ ೭.೩೫ರ ವೇಳಗೆ ಒಮ್ಮೆಗೆ ಬೀಸಿದ ಭಾರೀ ಗಾಳಿಯಿಂದಾಗಿ ಅಡ್ಕಬಳೆ, ಬಾಜಿನಡ್ಕ, ಬನ, ಕರಿಂಬಿ ಭಾಗದಲ್ಲಿ ಕರೆಂಟ್ ಕಂಬ, ತೆಂಗಿನ ಮರ, ಅಡಿಕೆ ಮರ, ರಬ್ಬರ್, ಹಾಗೂ ಇನ್ನಿತರ ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದಿದ್ದು, ಅಪಾರ ಕೃಷಿ ಹಾನಿ ಸಂಭವಿಸಿದೆ. ಕೆಲವು ಮನೆಗಳಿಗೆ ಹಾಗೂ ಕೊಟ್ಟಿಗೆಗೂ ಹಾನಿ ಸಂಭವಿಸಿದೆ.