ಹೊಸ ಸೋಲಾರ್ ಇನ್ ವರ್ಟರ್ ಮತ್ತು ಪಾತ್ರೆ ಸ್ಟಾಂಡ್ ಉದ್ಘಾಟನೆ
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಭಕ್ತಾದಿಗಳ ಸಭೆಯು ಅ.02 ರಂದು ಬೆಳಿಗ್ಗೆ ಗಂಟೆ 10.00 ಕ್ಕೆ ದೇವಸ್ಥಾನದಲ್ಲಿ ನಡೆಯಲಿದೆ.















ಬೆಳಿಗ್ಗೆ ಗಂಟೆ 8.00 ಕ್ಕೆ ಶ್ರೀ ದೇವರಿಗೆ ಪೂಜೆ ನಡೆಯಲಿದೆ.,8.15 ಕ್ಕೆ ಕದಿರು ಪೂಜೆ ಬಳಿಕ ಭಕ್ತಾದಿಗಳಿಗೆ ಕದಿರು ವಿತರಣೆ ನಡೆಯಲಿದೆ. ಗಂಟೆ 10.30 ಶನಿಪೂಜೆಯ ಲೆಕ್ಕಾಚಾರ ನಡೆಯಲಿದೆ. ಬಳಿಕ ಹೊಸ ಸೋಲಾರ್ ಇನ್ವರ್ಟರ್ ಮತ್ತು ಪಾತ್ರೆ ಸ್ಟಾಂಡ್ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಬಾಂಜಿಕೋಡಿ ತಿಳಿಸಿದ್ದಾರೆ.










