ಬೆಂಗಳೂರು ವಿವಿಪುರ ಕಾನೂನು ಮಹಾವಿದ್ಯಾಲಯದ ಪ್ರೊಫೆಸರ್ ಐವರ್ನಾಡಿನ ಮನೋಹರ್ ರವರಿಗೆ ಪಿ.ಹೆಚ್.ಡಿ. ಪದವಿ

0

ಬೆಂಗಳೂರು ವಿಶ್ವೇಶ್ವರಪುರ ಕಾನೂನು ಮಹಾವಿದ್ಯಾಲಯದ ಪ್ರೊ. ಮನೋಹರ್ ಡಿ. ಯವರಿಗೆ ಪ್ರತಿಷ್ಠಿತ ಪಿ.ಹೆಚ್.ಡಿ. ಪದವಿ ಲಭಿಸಿದೆ.
ಭಾರತದಲ್ಲಿ ಆಹಾರ ಸುರಕ್ಷತೆಯ ಸಮಸ್ಯೆಗಳು ಮತ್ತು ಸವಾಲುಗಳ ಕಡೆಗೆ ನ್ಯಾಯಾಂಗ ವಿಧಾನ ಎಂಬ ಸಂಶೋಧನಾ ಪ್ರಬಂಧವನ್ನು ರಾಜಸ್ಥಾನದ ಸನ್ ರೈಸ್ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಪ್ರೊ. ಮನೋಹರ್ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಐವರ್ನಾಡು ಗ್ರಾಮದ ಕೊಯಿಲ ದೊಡ್ಡಮನೆ ದಿ. ಭಟ್ಯಪ್ಪ ಗೌಡ ಮತ್ತು ದಿ. ಅಕ್ಕಮ್ಮ ದಂಪತಿಗಳ ಪುತ್ರರಾಗಿರುವ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಐವರ್ನಾಡಿನಲ್ಲಿ, ಪ್ರೌಢ ಮತ್ತು ಪಿಯು ವಿದ್ಯಾಭ್ಯಾಸವನ್ನು ಬೆಳ್ಳಾರೆ ಸರಕಾರಿ ಜೂನಿಯರ್ ಕಾಲೇಜು ಮತ್ತು ಪದವಿ ವಿದ್ಯಾಭ್ಯಾಸವನ್ನು ಸುಳ್ಯ ಎನ್.ಎಂ.ಸಿ. ಯಲ್ಲಿ ಪಡೆದಿದ್ದರು. ಬಳಿಕ ಮೈಸೂರಿನಲ್ಲಿ ಎಂ.ಎ. ಎಲ್.ಎಲ್.ಬಿ ಮತ್ತು ಎಲ್.ಎಲ್.ಎಂ. ಪದವಿಯನ್ನು ಪಡೆದಿರುತ್ತಾರೆ. ಇವರ ಪತ್ನಿ ಶ್ರೀಮತಿ ಕುಸುಮಾಕ್ಷಿ ಗೃಹಿಣಿಯಾದರೆ ಪುತ್ರಿ ಬೇಬಿ ಶಾರ್ವರಿ ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.