ಹಳೆಗೇಟು ಹೊಂಡ ಮುಚ್ಚಿ ಮಳಿಗೆಯ ಮುಂಭಾಗ ಸ್ವಚ್ಛ ಪಡಿಸಿದ ಕಾರ್ಮಿಕರು
ಹಳೆಗೇಟು ಮೊಗರ್ಪಣೆ ಬಳಿ ಕುಡಿಯುವ ನೀರಿನ ಪೈಪ್ ಹೊಡೆದು ನೀರು ಸೋರಿಕೆ ಆಗುತ್ತಿದೆ ಎಂದು ಅದನ್ನು ದುರಸ್ತಿ ಪಡಿಸಲು ಅಗೆದು ಹಾಕಿದ ಮಣ್ಣು ಸ್ಥಳೀಯರ ವ್ಯಾಪಾರ ಮಳಿಗೆಯ ಮುಂಭಾಗದಲ್ಲಿ ಎತ್ತರಕ್ಕೆ ರಾಶಿ ಹಾಕಿ ಸಮಸ್ಯೆ ಉಂಟಾಗಿದೆ ಎಂಬ ಬಗ್ಗೆ ತಮ್ಮ ಸಮಸ್ಯೆಯನ್ನು ಸಂಸ್ಥೆಯ ಮಾಲಕರು ಸುದ್ದಿಯೊಂದಿಗೆ ಹೇಳಿ ಕೊಂಡಿದ್ದರು.















ಈ ಬಗ್ಗೆ ಸುದ್ದಿ ವೆಬ್ಸೈಟಿನಲ್ಲಿ ವರದಿ ಬಿತ್ತರಗೊಂಡಿದ್ದು ಇದೀಗ ಮಾರನೇ ದಿನವೇ ಸಂಬಂಧಪಟ್ಟವರು ಹೊಂಡವನ್ನು ಮುಚ್ಚಿ ಪರಿಸರ ಸ್ವಚ್ಛತೆಯನ್ನು ಮಾಡುವ ಮೂಲಕ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.










