ಎಸ್ ಎಸ್ ಎಫ್ (ಸುನ್ನಿ ಸ್ಟೂಡೆಂಟ್ ಫೆಡರೇಶನ್) ಹಮ್ಮಿಕೊಂಡಿರುವ ಎಸ್ ಎಸ್ ಎಫ್ ಸಾಹಿತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಳ್ಯದ ಓಡಬಾಯಿ ನಿವಾಸಿ ಮಹಮ್ಮದ್ ಅಮಾನ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.















ಇವರು ತುರ್ಕಳಿಕೆಯಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ವಿಭಾಗದ ಪೆನ್ಸಿಲ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಉತ್ತರಪ್ರದೇಶದಲ್ಲಿ
ನಡೆಯಲಿರುವ ರಾಷ್ಟ್ರಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾಗಿದ್ದಾರೆ.
ಮೊಹಮ್ಮದ್ ಅಮಾನ್ ರವರು ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ 10 ನೇಯ ತರಗತಿಯ ವಿದ್ಯಾರ್ಥಿಯಾಗಿದ್ದು ಸುಳ್ಯದ ಓಡಬಾಯಿ ನಿವಾಸಿ ಅಬ್ದುಲ್ ರಹಮಾನ್ ಹಾಗೂ ಜೈನಬಾ ದಂಪತಿ ಪುತ್ರರಾಗಿದ್ದಾರೆ.










