ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಾಯಚೂರು ವತಿಯಿಂದ ಸೆ.21 ರಂದು ನಡೆದ 120ನೇ ಕಾರ್ಯಕ್ರಮ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನದಲ್ಲಿ ಸುಳ್ಯದ ಗಾಯಕರಾದ ವಿಜಯಕುಮಾರ್ ರವರಿಗೆ ರಾಷ್ಟ್ರಮಟ್ಟದ ಗಾನ ಗಂಧರ್ವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.















ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರ ವೇದಿಕೆಯಲ್ಲಿ ಸಂಸ್ಥಾಪಕರಾದ ಅಣ್ಣಪ್ಪ ಮೇಟಿ ಗೌಡ ಮತ್ತು ಸಮ್ಮೇಳನ ಅಧ್ಯಕ್ಷರಾದ ಚಿಕ್ಕನ ಡಿ.ಪಿ. ಹಾಗೂ ಉದ್ಘಾಟಕರಾಗಿ ಡಾ. ಸಿ ಸೋಮಶೇಖರ ಐಎಎಸ್ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ವಿಜಯ್ ಕುಮಾರ್ ಸುಳ್ಯ ಇವರಿಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿರುವುದನ್ನು ಮನಗೊಂಡು “ರಾಷ್ಟ್ರಮಟ್ಟದ ಗಾನ ಗಂಧರ್ವ ರತ್ನ ಪ್ರಶಸ್ತಿ 2025 “ರನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು. ಇದು ಇವರಿಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ 12ನೆಯ ಪ್ರಶಸ್ತಿ. ಪ್ರಸ್ತುತ ಇವರು ಸುಳ್ಯದ ಟಿಎಪಿಸಿಎಂಎಸ್ ಸುಳ್ಯ ಇದರ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಪ್ರಸ್ತುತ ಇವರು ಸುಳ್ಯ ಕನ್ನಡ ಸಾಹಿತ್ಯ ಪರಿಷತ್ತು ಇದರ ನಿರ್ದೇಶಕರಾಗಿರುತ್ತಾರೆ.










