ಬೆಳೆ ಸಮೀಕ್ಷೆ ಮಾಡಲು ರೂ. 500 ಕೊಡಬೇಕೆಂದು ತಾಕೀತು

0

ರೈತರ ಅಸಮಾಧಾನ – ಪತ್ರಿಕೆಗೆ ದೂರು

ಒಂದೇ ಒಂದು ಪೈಸೆ ಕೊಡಬೇಕಾಗಿಲ್ಲ : ಕೃಷಿ ಇಲಾಖಾ ಸಹಾಯಕ ನಿರ್ದೇಶಕರಿಂದ ಹೇಳಿಕೆ

ಬೆಳೆ ಸಮೀಕ್ಷೆ ಮಾಡಲು ಮನೆಮನೆಗೆ ಬರುತ್ತಿರುವವರು ಸಮೀಕ್ಷೆ ಅಪ್ಲೋಡ್ ಮಾಡಲು ರೂ.500 ನೀಡಬೇಕೆಂದು ಬಾಯಿ ಬಿಟ್ಟು ಕೇಳುತ್ತಿರುವ ಬಗ್ಗೆ ಕೃಷಿಕರು ದೂರುತ್ತಿದ್ದಾರೆ.

ತಾಲೂಕಿನ ಕೆಲವು ಭಾಗಗಳಲ್ಲಿ ದೂರುಗಳು ಹೆಚ್ಚು ಬರುತ್ತಿದ್ದು, ಹಣ ಕೊಡದಿದ್ದರೆ ಸಮೀಕ್ಷೆ ಮಾಡುತ್ತಿಲ್ಲವೆಂಬ ದೂರೂ ಕೇಳಿಬಂದಿದೆ.

ಈ ಬಗ್ಗೆ ಸುಳ್ಯದ ಕೃಷಿ ನಿರ್ದೇಶಕ ಗುರುಪ್ರಸಾದ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ ” ಬೆಳೆ ಸಮೀಕ್ಷೆಗೆ ಬರುವವರಿಗೆ ಸರಕಾರದ ವತಿಯಿಂದ ಹಣ ಕೊಡಲಾಗುತ್ತದೆ. ಆದ್ದರಿಂದ ಯಾವ ಕೃಷಿಕರೂ ಅವರಿಗೆ ಹಣ ಕೊಡಬೇಕಾಗಿಲ್ಲ. ಕೃಷಿಕರು ಸಾಧ್ಯವಾದರೆ ತಾವೇ ಆ್ಯಪ್ ನಲ್ಲಿ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು” ಎಂದು ತಿಳಿಸಿದ್ದಾರೆ.