ಸುಳ್ಯ : ರಿಕ್ಷಾ ಚಾಲಕ, ಸ್ನೇಹ ಸಂಗಮದ ಅಧ್ಯಕ್ಷ ಕುಸಿದು ಬಿದ್ದು ಹೃದಯಾಘಾತದಿಂದ ಮೃತ್ಯು

0

ಸುಳ್ಯದ ಜಟ್ಟಿಪಳ್ಳ ಬೊಳಿಯಮಜಲು ಸಮೀಪದ ನಿವಾಸಿ, ಶಾಸ್ತ್ರಿ ಸರ್ಕಲ್ ಬಳಿಯ ಕ್ಯೂ ನಲ್ಲಿ ರಿಕ್ಷಾ ನಿಲ್ಲಿಸಿ ಬಾಡಿಗೆ ಮಾಡುತ್ತಿದ್ದ ರಿಕ್ಷಾ ಚಾಲಕ ಅನಿಲ್ ಜೈನ್ ಎಂಬವರು ಇಂದು ಮುಂಜಾನೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತರಾಗಿರುವುದಾಗಿ ತಿಳಿದುಬಂದಿದೆ. ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲವೆನ್ನಲಾಗಿದೆ.
ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾಗಿರುವ ಅವರು ಪತ್ನಿ ಮತ್ತು ಪುತ್ರನ ಜತೆಗೆ ಬೊಳಿಯಮಜಲು ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಪತ್ನಿ ಸುಳ್ಯದ ಬಟ್ಟೆ ಮಳಿಗೆಯೊಂದರಲ್ಲಿ ದುಡಿಯುತ್ತಿದ್ದರು. ಪುತ್ರ ಪಿ.ಯು.ಸಿ. ಓದುತ್ತಿದ್ದಾನೆ.