














ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ಅಂಗನವಾಡಿ ಕೇಂದ್ರ ದೇವರಗದ್ದೆ ಇದರ ಆಶ್ರಯದಲ್ಲಿ ೨೪ನೇವರ್ಷದ ಶಾರದೋತ್ಸವವು ಭಕ್ತಿ ಸಡಗರದಿಂದ ದೇವಗದ್ದೆ ಅಂಗನವಾಡಿ ಕೇಂದ್ರದಲ್ಲಿ ಸೆ.29 ಆರಂಭವಾಯಿತು.

ಪುರೋಹಿತ ಶಂಕರ ಭಟ್ ವೈದಿಕ ವಿದಿ ವಿಧಾನ ನೆರವೇರಿಸಿದರು.
ಆರಂಭದಲ್ಲಿ ಗಣಪತಿ ಹೋಮ ನೆರವೇರಿತು. ಬಳಿಕ ಶಾರದಾ ಪ್ರತಿಷ್ಠೆ ನಡೆಯಿತು. ನಂತರ ಸಾರ್ವಜನಿಕರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಅಕ್ಷರಾಭ್ಯಾಸ, ಬೋಜನ ಪ್ರಸಾದ ವಿತರಣೆ ನಡೆಯಿತು.ಅಲ್ಲದೆ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳು ಮತ್ತು ಹಗ್ಗ ಜಗ್ಗಾಟ ನೆರವೇರಿತು.ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಸದಸ್ಯೆ ಸೌಮ್ಯಾ ಭರತ್, ಮಾಜಿ ಸದಸ್ಯ ಮಾಧವ.ಡಿ.ದೇವರಗದ್ದೆ, ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ, ಸಮಿತಿ ಅಧ್ಯಕ್ಷ ಸಂದೇಶ್ ಕೋಡಿಕಜೆ, ಕಾರ್ಯಾಧ್ಯಕ್ಷೆ ಶೀಲಾ ಗಣೇಶ್, ಕಾರ್ಯದರ್ಶಿ ಧನುಶ್ ದೇವರಗದ್ದೆ, ಉಪಾಧ್ಯಕ್ಷ ಲತೇಶ್ ದೇವರಗದ್ದೆ, ಅಂಗನವಾಡಿ ಕಾರ್ಯಕರ್ತೆ ಕಮಲಾ, ಸಹಾಯಕಿ ಆಶಾ ಶೇಷಕುಮಾರ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ರಮಾ ಕುಸುಮಾಧರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪವನ್ ಕಲ್ಲಜಡ್ಕ ಮತ್ತಿತರರು ಉಪಸ್ಥಿತರಿದ್ದರು.










