ನಾಳೆ(ಅ.1): ಪಂಜದಲ್ಲಿ 16ನೇ ವರುಷದ ಶ್ರೀ ಶಾರದೋತ್ಸವ

0

ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ)ಪಂಜ, ಶ್ರೀ ಶಾರದೋತ್ಸವ ಸಮಿತಿ -2025 ಇದರ ಆಶ್ರಯದಲ್ಲಿ ಪಂಜ ಪರಿಸರದ ನಾಡ ಹಬ್ಬ 16ನೇ ಶ್ರೀ ಶಾರದೋತ್ಸವ-2025 ಅ.1 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.ಪೂ.ಗಂಟೆ 8.21ಕ್ಕೆ ಪ್ರತಿಷ್ಠೆ, ಭಜನೆ, ಮಕ್ಕಳಿಗೆ ಅಕ್ಷರಾಭ್ಯಾಸ , ಧಾರ್ಮಿಕ ಸಭೆ, ಸಾಂಸ್ಕೃತಿಕ-ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಸಂಭ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಧಾರ್ಮಿಕ ಸಭೆ:ಪೂ. ಗಂ. 9.30ಕ್ಕೆ ಸಾಂಸ್ಕೃತಿಕ ಸ್ಪರ್ಧೆಯನ್ನು ಧ.ಗ್ರಾ.ಯೋ. (ರಿ) ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿ ಮಾಧವ ಗೌಡ ಉದ್ಘಾಟಿಸಲಿದ್ದಾರೆ.ಕ್ರೀಡಾ ಸ್ಪರ್ಧೆಯನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆ ಉಪನಿರೀಕ್ಷಕ ಕಾರ್ತಿಕ್ ಉದ್ಘಾಟಿಸಲಿದ್ದಾರೆ. ಪೂ. ಗಂ. 11.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶಾರದೋತ್ಸವ ಸಮಿತಿ-2025 ರ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಿಪಾಡಿ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುಧೀರ್ ಪ್ರಸಾದ್ ಎ ಪಾಲ್ಗೊಳ್ಳಲಿದ್ದಾರೆ.ಉಪ್ಪಿನಂಗಡಿ ಅಮೂಲ್ಯ ಗ್ಯಾಸ್ ಏಜೆನ್ಸಿಮ್ಹಾಲಕ ಹಾಗೂ ಕರ್ನಾಟಕ ನಿವೃತ್ತಿ BSF ಯೋಧರ ಕ್ಷೇಮಾಭಿವೃದ್ಧಿ ಸಮಿತಿ ಬೆಂಗಳೂರು ಇದರ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, (ನಿವೃತ್ತ ಡೆಪ್ಯೂಟಿ ಕಮಾಡೆಂಟ್ BSF) ಸನ್ಮಾನ ಪುರಸ್ಕೃತರು. ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪಂಜ ಕ್ಲಸ್ಟರಿನ ಒಂಭತ್ತು ಶಾಲೆಗಳ ಆಯ್ದ ಒಂಭತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷಸಂತೋಷ್ ಕುತ್ತಮೊಟ್ಟೆ ಪುರಸ್ಕರಿಸಲಿದ್ದಾರೆ.

ಸ್ಪರ್ಧಾ ಕಾರ್ಯಕ್ರಮ:
ಪೂರ್ವಾಹ್ನ ಗಂಟೆ 9.00ರಿಂದ ರಂಗೋಲಿ- ಕಿರಿಯ ,ಹಿರಿಯ ,ಪ್ರೌಢ, ಸಾರ್ವಜನಿಕ ವಿಭಾಗ. ಚಿತ್ರಕಲಾ ಸ್ಪರ್ಧೆ – ಯಲ್.ಕೆ.ಜಿ., ಯು.ಕೆ.ಜಿ. ಮತ್ತು 1ನೇ ತರಗತಿ -ಐಚ್ಛಿಕ, 2ರಿಂದ 4ನೇ ತರಗತಿ- ಸ್ವಚ್ಚ ಪರಿಸರ 5ರಿಂದ 7ನೇ ತರಗತಿ- ಶಾರದೆ, 8ರಿಂದ 10ನೇ ತರಗತಿ- ಗ್ರಾಮೀಣ ಜೀವನ ಭಕ್ತಿಗೀತೆ, ರಸಪ್ರಶ್ನೆ – ಕಿರಿಯ (1-4 ತರಗತಿ),ಹಿರಿಯ (5-8 ತರಗತಿ) ,ಪ್ರೌಢ (9-10 ತರಗತಿ) ಸಾರ್ವಜನಿಕರಿಗೆ ನಡೆಯಲಿದೆ.
ಯಲ್.ಕೆ.ಜಿ., ಯು.ಕೆ.ಜಿ., ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ. ಮಹಿಳೆಯರಿಗೆ ಸಂಗೀತ ಕುರ್ಚಿ, ಮೋಜಿನ ಆಟಗಳು , ಗೋಣಿಚೀಲ ಓಟ ಮತ್ತು ಲಿಂಬೆ ಚಮಚ ಓಟ ಸ್ಪರ್ಧೆಗಳು ವಿರುತ್ತದೆ.
70 ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ಪ್ರಥಮ ರೂ. 5,000 ನಗದು ಮತ್ತು ಟ್ರೋಫಿ, ದ್ವಿತೀಯ ರೂ.3,000 ನಗದು ಮತ್ತು ಟ್ರೋಫಿ,ಸೆಮಿಫೈನಲ್‌ ನಲ್ಲಿ ನಿರ್ಗಮಿತ ತಂಡಗಳಿಗೆ ರೂ. 1,000 ನಗದು ಬಹುಮಾನ ವಿರುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಅ. ಗಂ. 1ರಿಂದ 2 ತನಕ ರಂಜನಿ ಸಂಗೀತ ಸಭಾ ಎಲಿಮಲೆ (ರಿ.) ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತ ಗುರುಗಳಾದ ಶ್ರೀಮತಿ ರೇಖಾ ಹೊನ್ನಾಡಿ ಇವರ ನಿರ್ದೇಶನದಲ್ಲಿ ಸ್ವರ ರಾಗ ಸುಧಾ ಕಾರ್ಯಕ್ರಮ. ಅ.ಗಂ.2.ರಿಂದ 3 ತನಕ ವಿಶ್ವ ಕಲಾನಿಕೇತನ ಕಲ್ಚರಲ್ & ಆರ್ಟ್ಸ್ ಪುತ್ತೂರು, ಪಂಜ ಶಾಖೆ ಇದರ ವಿದ್ಯಾರ್ಥಿಗಳಿಂದ ಭರತನಾಟ್ಯ (ನಿರ್ದೇಶನ: ಕರ್ನಾಟಕ ಕಲಾಶ್ರೀ, ವಿಧೂಷಿ ನಯನ ವಿ. ರೈ, ವಿಧೂಷಿ ಸ್ವಸ್ತಿಕಾ ಆರ್. ಶೆಟ್ಟಿ), ಅ. ಗಂ.3 ರಿಂದ 4 ತನಕ ಕಲಾ ಮಂದಿರ್ ಡ್ಯಾನ್ಸ್ ಕ್ರಿವ್ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಸಂಭ್ರಮ (ಸಂಯೋಜನೆ :ಪ್ರಮೋದ್ ರೈ ಬೆಳ್ಳಾರೆ, ನಿರ್ದೇಶನ: ಅಶೋಕ್ ಬೆಳ್ಳಾರೆ) ನಡೆಯಲಿದೆ.

ವೈಭವದ ಶೋಭಾಯಾತ್ರೆ:
ಸಂಜೆ 4.30 ರಿಂದ ಶ್ರೀ ಶಾರದಾಮಾತೆಯ
ಶೋಭಾಯಾತ್ರೆ-ಜಲಸ್ತಂಭನ ನಡೆಯಲಿದೆ. ಅನೇಕ ಕುಣಿತ ಭಜನೆ ತಂಡಗಳು ಮತ್ತು ಭಜನೆ, ನಾಸಿಕ್ ಬ್ಯಾಂಡ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ.