ಅ.2ರಂದು ಯುವಜನ ಸಂಯುಕ್ತ ಮಂಡಳಿ ವತಿಯಿಂದ ಹೃದಯ ರಕ್ಷಕ್ ಕಾರ್ಯಕ್ರಮ

0

75 ದಿನಗಳ ಸ್ವಚ್ಚತಾ ಅಭಿಯಾನ – ‘ಪಂಚಸಪ್ತತಿ -2025’ ಬ್ಯಾನರ್ ಅನಾವರಣ

ಸುಳ್ಯದ ಯುವಜನ ಸಂಯುಕ್ತ ಮಂಡಳಿ ಆಶ್ರಯದಲ್ಲಿ ತಾಲೂಕಿನ ಯುವಕ ಯುವತಿ ಮಂಡಲಗಳ ಯುವಕ – ಯುವತಿಯರಿಗೆ ಹೃದಯ ರಕ್ಷಣೆಯ ಕುರಿತು ಹೃದಯ ರಕ್ಷಕ್ ಮಾಹಿತಿ ಕಾರ್ಯಾಗಾರ ಅ.2ರಂದು ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯುವುದು.

ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ತಜ್ಞ ವೈದ್ಯರುಗಳು ತರಬೇತಿ ‌ನೀಡಲಿದ್ದಾರೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾಹಿತಿ ಪಡೆಯಬಹುದಾಗಿದೆ.

ಪಂಚಸಪ್ತತಿಗೆ ಬ್ಯಾನರ್ ಬಿಡುಗಡೆ

ಯುವಜನ ಸಂಯುಕ್ತ ಮಂಡಳಿ ಯುವಕ ಸಂಘಗಳ ಮೂಲಕ ತಾಲೂಕಿನಲ್ಲಿ ‌ಸ್ವಚ್ಚತೆಯ ಜಾಗೃತಿ ನಡೆಸಲು ನಿರ್ಧರಿಸಿದ್ದು ಅ.10ರಿಂದ 75 ದಿನಗಳ ಕಾಲ ನಡೆಯುವ ಪಂಚಸಪ್ತತಿ ಕಾರ್ಯಕ್ರಮದ ಬ್ಯಾನರ್ ಬಿಡುಗಡೆಯೂ ಇದೇ ಸಂದರ್ಭದಲ್ಲಿ ‌ನಡೆಯುವುದು. ಸ್ವಚ್ಚತಾ ಅಭಿಯಾನದಲ್ಲಿ ನೋಂದಾವಣೆ ಮಾಡಿಕೊಂಡಿರುವ ಯುವಕ ಯುವತಿ ಮಂಡಲದ‌ ಪದಾಧಿಕಾರಿಗಳು ಭಾಗವಹಿಸಿ ಈ ಕಾರ್ಯಕ್ರಮದ ಮಾಹಿತಿ ಪಡೆಯಬಹುದಾಗಿದೆ ಎಂದು ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಹಾಗೂ ಕಾರ್ಯದರ್ಶಿ ಮುರಳಿ‌ ನಳಿಯಾರು ತಿಳಿಸಿದ್ದಾರೆ.