ಪಂಜದಲ್ಲಿ 16ನೇ ವರುಷದ ಶ್ರೀ ಶಾರದೋತ್ಸವ: ದೇವರನ್ನು ಮತ್ತು ದೇಶವನ್ನು ಆರಾಧಿಸಿ: ವೆಂಕಟ್ರಮಣ ರಾವ್ ಮಂಕುಡೆ

0

ಶ್ರೀ ಶಾರದಾಂಬಾ ಭಜನಾ ಮಂಡಳಿ (ರಿ)ಪಂಜ, ಶ್ರೀ ಶಾರದೋತ್ಸವ ಸಮಿತಿ -2025 ಇದರ ಆಶ್ರಯದಲ್ಲಿ ಪಂಜ ಪರಿಸರದ ನಾಡ ಹಬ್ಬ 16ನೇ ಶ್ರೀ ಶಾರದೋತ್ಸವ-2025 ಸೆ.1 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶಾರದೋತ್ಸವ ಸಮಿತಿ-2025 ರ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ ಧಾರ್ಮಿಕ ಉಪನ್ಯಾಸ ನೀಡಿ” ಮನೆಯೊಳಗೆ ಸಾಮರಸ್ಯ ಸಂಸ್ಕಾರಯುತ ಜೀವನ ನಡೆಸ ಬೇಕು.ದೇಶದ ಹಿತಾದೃಷ್ಟಿಯಿಂದ ಸ್ವದೇಶಿ ವಸ್ತುಗಳನ್ನು ಬಳಸ ಬೇಕು.ಪರಿಸರ ರಕ್ಷಿಸ ಬೇಕು.ಪರಿಸರ ನಾಶವಾದರೆ ಸಂಕಷ್ಟ ಎದುರಾಗಲಿದೆ. ದೇವರ ಆರಾಧನೆ ಯೊಂದಿಗೆ ದೇಶದ ಆರಾಧನೆ ಮಾಡ ಬೇಕು.ಎಂದು ಹೇಳಿದರು. ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ ಸಭಾಧ್ಯಕ್ಷತೆ ವಹಿಸಿದ್ದರು.

ಉಪ್ಪಿನಂಗಡಿ ಅಮೂಲ್ಯ ಗ್ಯಾಸ್ ಏಜೆನ್ಸಿ ಮ್ಹಾಲಕ ಹಾಗೂ ಕರ್ನಾಟಕ ನಿವೃತ್ತಿ BSF ಯೋಧರ ಕ್ಷೇಮಾಭಿವೃದ್ಧಿ ಸಮಿತಿ ಬೆಂಗಳೂರು ಇದರ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, (ನಿವೃತ್ತ ಡೆಪ್ಯೂಟಿ ಕಮಾಡೆಂಟ್ BSF) ಸನ್ಮಾನ ಪುರಸ್ಕೃರ ಸ್ವೀಕರಿಸಿದರು.

ಮುಖ್ಯ ಅತಿಥಿಗಳಾಗಿ ಕೊಡಿಪಾಡಿ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುಧೀರ್ ಪ್ರಸಾದ್ ಎ , ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಉಪಾಧ್ಯಕ್ಷ ಪರಮೇಶ್ವರ ಬಿಳಿಮಲೆ, ಉತ್ಸವ ಸಮಿತಿ ಕಾರ್ಯದರ್ಶಿ ರಾಜ ಕುಮಾರ್ ಬೇರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರತಿಭಾ ಪುರಸ್ಕಾರ:


ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪಂಜ ಕ್ಲಸ್ಟರಿನ ಒಂಭತ್ತು ಶಾಲೆಗಳ ಆಯ್ದ ಒಂಭತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಭಜನಾ ಮಂಡಳಿಯ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ ಪುರಸ್ಕರಿಸಿದರು. ಕರಿಕ್ಕಳ ಶಾಲೆಯ ದಿಶಾಂತ್ ಸಿ, ಕೋಟೆಗುಡ್ಡೆ ಶಾಲೆಯ‌ ರೋಶನ್ ಸಿ, ಕೂತ್ಕುಂಜ ಶಾಲೆಯ ಚಿರಸ್ವಿ, ನಾಗತೀರ್ಥ ಶಾಲೆಯ ಸುಪ್ರೀತಾ, ಪಡ್ಪಿನಂಗಡಿ ಶಾಲೆಯ ತನ್ವಿ ಎ , ಪಂಜ ಶಾಲೆಯ ಸ್ಮಿತಾಶ್ರೀ ಡಿ ಕೆ, ಕಲ್ಮಡ್ಕ ಶಾಲೆಯ ಪೃಥ್ವಿ ಕೆ ಯಚ್, ಪಂಬೆತ್ತಾಡಿ ಶಾಲೆಯ ಪ್ರಣಯ್ ಜೆ , ಪಾಂಡಿಗದ್ದೆ ಶಾಲೆಯ ಯಜ್ಞ ರವರು ಪುರಸ್ಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಹಾಲಿಂಗ ಸಂಪ ಪ್ರಾರ್ಥಿಸಿದರು. ಪರಮೇಶ್ವರ ಬಿಳಿಮಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತೀರ್ಥಾನಂಂದ ಕೊಡೆಂಕಿರಿ ನಿರೂಪಿಸಿದರು. ರಾಜಕುಮಾರ್ ಬೇರ್ಯ ವಂದಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮ:


ಅ. ಗಂ. 1ರಿಂದ 2 ತನಕ ರಂಜನಿ ಸಂಗೀತ ಸಭಾ ಎಲಿಮಲೆ (ರಿ.) ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತ ಗುರುಗಳಾದ ಶ್ರೀಮತಿ ರೇಖಾ ಹೊನ್ನಾಡಿ ಇವರ ನಿರ್ದೇಶನದಲ್ಲಿ ಸ್ವರ ರಾಗ ಸುಧಾ ಕಾರ್ಯಕ್ರಮ. ಅ.ಗಂ.2.ರಿಂದ 3 ತನಕ ವಿಶ್ವ ಕಲಾನಿಕೇತನ ಕಲ್ಚರಲ್ & ಆರ್ಟ್ಸ್ ಪುತ್ತೂರು, ಪಂಜ ಶಾಖೆ ಇದರ ವಿದ್ಯಾರ್ಥಿಗಳಿಂದ ಭರತನಾಟ್ಯ (ನಿರ್ದೇಶನ: ಕರ್ನಾಟಕ ಕಲಾಶ್ರೀ, ವಿಧೂಷಿ ನಯನ ವಿ. ರೈ, ವಿಧೂಷಿ ಸ್ವಸ್ತಿಕಾ ಆರ್. ಶೆಟ್ಟಿ), ಅ. ಗಂ.3 ರಿಂದ 4 ತನಕ ಕಲಾ ಮಂದಿರ್ ಡ್ಯಾನ್ಸ್ ಕ್ರಿವ್ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಸಂಭ್ರಮ (ಸಂಯೋಜನೆ :ಪ್ರಮೋದ್ ರೈ ಬೆಳ್ಳಾರೆ, ನಿರ್ದೇಶನ: ಅಶೋಕ್ ಬೆಳ್ಳಾರೆ) ನಡೆಯಲಿದೆ.

ವೈಭವದ ಶೋಭಾಯಾತ್ರೆ:


ಸಂಜೆ 4.30 ರಿಂದ ಶ್ರೀ ಶಾರದಾಮಾತೆಯ
ಶೋಭಾಯಾತ್ರೆ-ಜಲಸ್ತಂಭನ ನಡೆಯಲಿದೆ. ಅನೇಕ ಕುಣಿತ ಭಜನೆ ತಂಡಗಳು ಮತ್ತು ಭಜನೆ, ನಾಸಿಕ್ ಬ್ಯಾಂಡ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ.