ಧಾರ್ಮಿಕ ಆಚರಣೆಗಳು ನಿರಂತರ ನಡೆಯಬೇಕು – ಅರುಣ್ ಕುಮಾರ್ ಪುತ್ತಿಲ
ಇಂದು ರಾತ್ರಿ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ – ಜಲಸ್ತಂಭನ

ಕೊಡಿಯಾಲ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 25 ನೇ ವರ್ಷದ ಶ್ರೀ ಶಾರದೋತ್ಸವವು ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ವಠಾರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.01 ರಂದು ನಡೆಯಿತು. ಬೆಳಿಗ್ಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಆರ್ವಾರ ವಹಿಸಿದ್ದರು. ಪುತ್ತೂರಿನ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಇಪ್ಪತ್ತೈದನೇ ವರ್ಷದ ಶಾರದೋತ್ಸವವನ್ನು ಆಚರಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಇದರ ಜೊತೆಗೆ ರಾಷ್ಡ್ರ ರಕ್ಷಣೆ ಮಾಡಿದ ನಿವೃತ್ತ ಯೋಧರನ್ನು,ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿರುವುದು,ಅಶಕ್ತ ಕುಟುಂಬದ ಕಣ್ಣೀರು ವರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು. ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಉತ್ತಮ ಸಮಾಜ,ಹಿಂದೂ ಧರ್ಮದ ಉಳಿವು ಸಾಧ್ಯ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ
ಶಾರದೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ವೆಂಕಟೇಶ್ ಪೈ ಬಾಚೋಡಿ, ನಿವೃತ್ತ ಯೋಧರಾದ ರವೀಂದ್ರ ಗೌಡ ರಾಮಕುಮೇರಿ,ಸಂಜೀವ ಗೌಡ ರಾಮಕುಮೇರಿ, ಕೊರಗಪ್ಪ ಗೌಡ ಕಲ್ಪಡ ರವರನ್ನು ಶಾಲು ಹೊದಿಸಿ, ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಆಪ್ತ ರೈ,ಧನಲಕ್ಷ್ಮೀಯವರನ್ನು ಸನ್ಮಾನಿಸಲಾಯಿತು.
ಅಶಕ್ತ ಕುಟುಂಬಗಳಿಗೆ ಧನಸಹಾಸಯ ನೀಡಲಾಯಿತು. ಆರು ಮಂದಿಗೆ ಧನಸಹಾಯ ವಿತರಿಸಲಾಯಿತು.
















ಭಾಸ್ಕರ ರೈ, ಕುಮಾರಿ ಗಿರಿಜ ಕಲ್ಲಗದ್ದೆ, ಶ್ರೀಮತಿ ಬೀತ್ರು ಇಟ್ಯಾಡಿ,ಕೊರಪ್ಪೊಳು ಕುಂಟಿನಿ, ಕಮಲ ಕಲ್ಪಡ,ಧರ್ಮಾವತಿ ಪೆರಿಯಾಣ ರವರು ಧನಸಹಾಯ ಪಡೆದುಕೊಂಡರು.
ಶಾರದೋತ್ಸವ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್ ಕುರಿಯಾಜೆ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಕಲ್ಲಗದ್ದೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ಎಸ್.ರೈ, ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಶೇಷಪ್ಪ ಆಚಾರ್ಯ ಉಪಸ್ಥಿತರಿದ್ದರು.
ಜನನಿ ಮತ್ತು ಕವನ್ ಪ್ರಾರ್ಥಿಸಿ, ಮಾಜಿ ಅಧ್ಯಕ್ಷ ಕರುಣಾಕರ ರೈ ಮರಿಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿ, ಭಾಸ್ಕರ್ ವಂದಿಸಿದರು. ಶಾರದೋತ್ಸವ ಸಮಿತಿಯ ಕಾರ್ಯದರ್ಶಿ ಶೀತಲ್ ಕುರಿಯಾಜೆ,ಉಪಾಧ್ಯಕ್ಷ ಕುಕ್ಕಪ್ಪ ಗೌಡ ಕುಂಟಿನಿ, ಜತೆ ಕಾರ್ಯದರ್ಶಿ ಪ್ರಕಾಶ ರೈ ಕಲ್ಲಗದ್ದೆ ಹಾಗೂ ಸರ್ವಸದಸ್ಯರು ಸಹಕರಿಸಿದರು.
ಬೆಳಿಗ್ಗೆ ಶ್ರೀ ಶಾರದಾ ದೇವಿ ಪ್ರತಿಷ್ಠಾಪನೆ,ನಂತರ ಸಾಮೂಹಿಕ ಆಯುಧ ಪೂಜೆ ನಡೆಯಿತು. ನಂತರ ಶ್ರೀ ಅಯ್ಯಪ್ಪ ಸ್ವಾಮಿ ಮಕ್ಕಳ ಕುಣಿತ ಭಜನಾ ತಂಡ ಕಲ್ಪಣೆ,ಶ್ರೀ ಧರ್ಮಶ್ರೀ ಮಕ್ಕಳ ಕುಣಿತ ಭಜನಾ ತಂಡ ಕಲ್ಪಡ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ,ಅಕ್ಷರಾಭ್ಯಾಸ,ಪ್ರಸಾದ ವಿತರಣೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಆಟೋಟ ಸ್ಪರ್ಧೆಗಳು ನಡೆಯುತ್ತಿದೆ. ಸಂಜೆ ಗಂಟೆ 4.00 ರಿಂದ ಕಲ್ಲಗದ್ದೆ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6.00 ರಿಂದ 10.00 ರ ತನಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಬನತ ಬಂಗಾರ್” ಯಕ್ಷಗಾನ ನಡೆಯಲಿದೆ. ರಾತ್ರಿ ಗಂಟೆ 10.00 ಕ್ಕೆ ಮಹಾಪೂಜೆ,ಶ್ರೀ ದೇವಿಯ ಶೋಭಾಯಾತ್ರೆ ನಡೆಯಲಿದೆ.










