32 ಇಂಚಿನ ಎಲ್ಇಡಿ ಅಭಿರಾಮ್ ಪಾಲಿಗೆ..!
ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತ ಬಂದಿರುವ ಸೃಷ್ಠಿ ಫ್ಯಾನ್ಸಿ & ಮೊಬೈಲ್ ಮಳಿಗೆಯಲ್ಲಿ ಗ್ರೇಟ್ ಫೆಸ್ಟಿವಲ್ ಸೇಲ್ ನಡಿಯುತ್ತಿದ್ದು, ಈ ಪ್ರಯುಕ್ತ ೨ ತಿಂಗಳಿಗೊಮ್ಮೆ ನಡೆಯುವ ಕೂಪನ್ ಡ್ರಾ ಕಾರ್ಯಕ್ರಮ ಅ.1 ರಂದು ನಡೆಯಿತು.

ಡ್ರಾ ಕಾರ್ಯಕ್ರಮವನ್ನು ಸುದ್ದಿ ಚಾನೆಲ್ನ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ ಮತ್ತು ಸುದ್ದಿ ಚಾನೆಲ್ನ ನಿರೂಪಕಿ, ಪತ್ರಕರ್ತೆ ಪೂಜಾಶ್ರೀ ವಿತೇಶ್ಕೋಡಿ ನಡೆಸಿಕೊಟ್ಟರು.

ಮೊದಲ ಬಹುಮಾನ 32 ಇಂಚಿನ ಎಲ್ಇಡಿ ಟಿವಿಯನ್ನು ಅಭಿರಾಮ್ (311), ಎರಡನೇ ಬಹುಮಾನ ಜೆಬಿಎಲ್ ಹೋಮ್ಥೇಟರ್ನ್ನು ಉಮೇಶ್ ರಾವ್ (216)ಹಾಗೂ ಮೂರನೇ ಬಹುಮಾನ ಟ್ರೋಲಿ ಬ್ಯಾಗ್ನ್ನು ಸಂದೀಪ್ (190) ಪಡೆದುಕೊಂಡರು.















ಸಂಸ್ಥೆಯ ಮಾಲಕ ಸಂಸ್ಥೆಯ ಮಾಲಕ ಶೈಲೇoದ್ರ ಸರಳಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.










