ತಾಲೂಕಿನ 14 ಕಡೆಗಳಲ್ಲಿ ಸಂಘ ಶತಾಬ್ದಿ ಕಾರ್ಯಕ್ರಮ
ರಾಷ್ಟ್ರೀಯ ಸ್ವಯಂ ಸೇವಾ ಸಂಘ ಆರಂಭಗೊಂಡು 100 ವರ್ಷ ವಾಗಿರುವ ಹಿನ್ನಲೆಯಲ್ಲಿ ಸಂಘ ಶತಾಬ್ದಿ ಕಾರ್ಯಕ್ರಮ ನಡೆಸಲು ಸಿದ್ದತೆಗಳು ನಡೆಸಲಾಗಿದ್ದು ಸಂಘದ ತಾಲೂಕು ವ್ಯಾಪ್ತಿಯಲ್ಲಿ 14 ಕಡೆಗಳಲ್ಲಿ ಸಂಘ ಶತಾಬ್ದಿ ಕಾರ್ಯಕ್ರಮ ಇಂದು ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ಏಕಕಾಲದಲ್ಲಿ 14 ಕಡೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು ಪ್ರತೀ ಕಡೆಯಲ್ಲಿಯೂ ಆಯಾ ವ್ಯಾಪ್ತಿಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ದೇಶಾದ್ಯಂತ ಈ ಕಾರ್ಯಕ್ರಮ ನಡೆಯಲಿದ್ದು ಸಂಘದ ಸುಳ್ಯ ಮಂಡಲ ವ್ಯಾಪ್ತಿಯಲ್ಲಿಯೂ ಸಂಘ ಶತಾಬ್ದಿ ನಡೆಯುವುದು.















ಆರ್.ಎಸ್.ಎಸ್. ಸಮವಸ್ತ್ರ ಹಾಗೂ ಸಮವಸ್ತ್ರ ಇಲ್ಲದವರು ಬಿಳಿ ಶರ್ಟ್, ಪಂಚೆ ಧರಿಸುತ್ತಾರೆ. ಮಹಿಳೆಯರು ಸೀರೆಯಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ.
ಸುಳ್ಯ ತಾಲೂಕಿಗೆ ಸಂಬಂಧಿಸಿದಂತೆ ಕೊಡಗು ಸಂಪಾಜೆ ವ್ಯಾಪ್ತಿಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನ ಸಂಪಾಜೆ, ಅರಂತೋಡು ವ್ಯಾಪ್ತಿಯಲ್ಲಿ ದುರ್ಗಾಪರಮೇಶ್ವರಿ ಭಜನಾ ಮಂದಿರ ಅರಂತೋಡು, ಅಜ್ಜಾವರ ವ್ಯಾಪ್ತಿಯಲ್ಲಿ ಆಲೆಟ್ಟಿ ಸದಾಶಿವ ದೇವಸ್ಥಾನ, ಜಾಲ್ಸೂರು ವ್ಯಾಪ್ತಿಯಲ್ಲಿ ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನದ ವಠಾರ, ಐವರ್ನಾಡು ವ್ಯಾಪ್ತಿಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ವಠಾರ, ಬೆಳ್ಳಾರೆ ವ್ಯಾಪ್ತಿಯಲ್ಲಿ ಅಜಪಿಲ ದೇವಸ್ಥಾನ ಬೆಳ್ಳಾರೆ, ಬಾಳಿಯ ವ್ಯಾಪ್ತಿಯಲ್ಲಿ ಶ್ರಿರಾಮ ಭಜನಾ ಮಂದಿರ ಕಲ್ಮಡ್ಕ, ಪಂಜ ವ್ಯಾಪ್ತಿಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನ ಪಂಜ, ಎಣ್ಮೂರು ವ್ಯಾಪ್ತಿಯಲ್ಲಿ ಎಡಮಂಗಲ ದೇವಸ್ಥಾನದ ವಠಾರ, ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಆದಿಶಕ್ತಿ ಭಜನಾ ಮಂದಿರ ಏನೆಕಲ್ಲು, ಹರಿಹರ ವ್ಯಾಪ್ತಿಯಲ್ಲಿ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತಡ್ಕ, ವಳಲಂಬೆ ವ್ಯಾಪ್ತಿಯಲ್ಲಿ ಶಂಖಪಾಲ ದೇವಸ್ಥಾನ ವಳಲಂಬೆ, ಮರ್ಕಂಜ ವ್ಯಾಪ್ತಿಯಲ್ಲಿ ರೆಂಜಾಳ ದೇವಸ್ಥಾನದ ವಠಾರ, ಸುಳ್ಯ ನಗರದಲ್ಲಿ ಜಾನಕಿ ವೆಂಕಟರಮಣ ಸಭಾಂಗಣ ಸಂಘ ಶತಾಬ್ದಿ ಕಾರ್ಯಕ್ರಮ ನಡೆಯುವುದು.










