ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಚಿಂತನ ವೇದಿಕೆ ಸುಳ್ಯ ಇದರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸುಳ್ಯ ಪೇಟೆಯಲ್ಲಿ ಬೃಹತ್ ನಡಿಗೆ ಕಾರ್ಯಕ್ರಮ ಅ.೨ರಂದು ನಡೆಯಿತು.















ಜ್ಯೋತಿ ಸರ್ಕಲ್ ಬಳಿ ಮಹತ್ಮ ಗಾಂಧೀಜಿಯವರ ಭಾವ ಚಿತ್ರಕ್ಕೆ ನಿವೃತ್ತ ಪ್ರಾಂಶುಪಾಲ ಪ್ರೋ. ಬಾಲಚಂದ್ರ ಗೌಡರು ಪುಷ್ಪಾರ್ಚಣೆ ಮಾಡಿ ಗಾಂಧಿ ನಡಿಗೆಗೆ ಚಾಲನೆ ನೀಡಿದರು.
ಗಾಂಧಿ ನಡಿಗೆಯಲ್ಲಿ ಅನೇಕ ಗಣ್ಯರು, ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಜ್ಜೆ ಹಾಕಿದರು. ಗಾಂಧಿನಗರದ ಗಾಂಧೀ ಪಾರ್ಕ್ನಲ್ಲಿ ಸಮಾಪನಗೊಂಡಿತು. ಅಲ್ಲಿ ಮಹತ್ಮಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಗಾಂಧೀ ಚಿಂತನೆ ಕಾರ್ಯಕ್ರಮ ನಡೆಯಿತು.










