














ವಿದುಷಿ ಸುರಕ್ಷಾ ಕೆ. ಆರ್,ರವರ ನೇತೃತ್ವದಲ್ಲಿ ಬೆಳ್ಳಾರೆ ಶ್ರೀ ಸದಾಶಿವ ಶಿಶು ಮಂದಿರದ ಆಶ್ರಯದಲ್ಲಿ ಸುಮಚರಣಂ ನಾಟ್ಯಾಲಯ ‘ ದಲ್ಲಿ ಮೂಲಕ ಭರತ ನಾಟ್ಯ ತರಗತಿಯ ಉದ್ಘಾಟನೆ ಅ. 2ರಂದು
ಶರತ್ ಜೋಶಿ ಸಭಾ ಭವನದಲ್ಲಿ ನಡೆಯಿತು. ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಬೆಳ್ಳಾರೆ ಇದರ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ, ದೀಪ ಪ್ರಜ್ವಲನೆಗೊಳಿಸುವುದರ ಮೂಲಕ ಭರತ ನಾಟ್ಯ ತರಗತಿಗೆ ಚಾಲನೆ ನೀಡಿದರು. ಶ್ರೀ ನಟರಾಜ ವಿಗ್ರಹಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ ಭರತ ನಾಟ್ಯವು ಅತ್ಯಂತ ಹಳೆಯ ಸಾಂಪ್ರದಾಯಿಕ ಕಲೆಯಾಗಿದ್ದು, ತನ್ಮೂಲಕ ಏಕಾಗ್ರತೆ ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ, ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ, ಈ ಕಲೆಯು ಇಂದಿಗೂ ನಿತ್ಯ ನೂತನವಾಗಿ ಮುಂದುವರೆಯುತ್ತಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವೇದಾಮೃತ ಕ್ಲಿನಿಕ್ ನ ವೈದ್ಯೆ ಡಾl ಕಾವ್ಯ ಜಬಳೆ, ಚಿತ್ಕಲಾ ಆರ್ಟ್ಸ್ ಬೆಳ್ಳಾರೆ ( ಡ್ರಾಯಿಂಗ್) ಯ ನಿರ್ದೇಶಕಿ ಶ್ರೀಮತಿ ಶಮಿತಾ ಪಿ.ರೈ, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾನ ಕೀರ್ತನ ಸಂಗೀತ ಶಾಲೆಯ ನಿರ್ದೇಶಕಿ ಶ್ರೀಮತಿ ಮಾಲಿನಿ ಕೃಷ್ಣ ಮೋಹನ್ ಶುಭ ಹಾರೈಸಿದರು. ಸಂಸ್ಥೆಯ ಪೋಷಕರಾದ ಸುರೇಶ್ ಭಟ್ ಅಂಕತ್ತಡ್ಕ ವೇದಿಕೆಯಲ್ಲಿದ್ದು, ಶುಭಹಾರೈಸಿದರು. ಸುಮಚರಣಂ ನಾಟ್ಯಾಲಯದ ನಿರ್ದೇಶಕ ಡಾl ರಾಮ್ ಕಿರಣ್ ಅಂಕತ್ತಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿದುಷಿ ಸುರಕ್ಷಾ ಕೆ ಆರ್ ಶ್ರೀ ದೇವರ ಸ್ತುತಿ ಯೊಂದಿಗೆ ‘ ಪ್ರಾರ್ಥನಾ ನಾಟ್ಯ ‘ ಗೈದು, ವಂದನಾರ್ಪಣಾ ನಾಟ್ಯವನ್ನು ಸಾದರ ಪಡಿಸಿದರು. ಕಾರ್ಯಕ್ರಮದಲ್ಲಿ ಗುರುವಂದನೆಯೊಂದಿಗೆ ‘ ಗೆಜ್ಜೆ ‘ ಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ತರಗತಿಗಳನ್ನು ಪ್ರಾರಂಭಿಸಿದರು.
ನೃತ್ಯ ಗುರು, ವಿದುಷಿ ಸುರಕ್ಷಾ ಕೆ.ಆರ್ ತರಗತಿಗಳು ಪ್ರತಿ ಆದಿತ್ಯವಾರದಂದು ಶ್ರೀ ಸದಾಶಿವ ಶಿಶುಮಂದಿರದಲ್ಲಿ ನಡೆಯಲಿದ್ದು, ಸುಮಚರಣಂ ನಾಟ್ಯಾಲಯ ಹೆಸರಿನಲ್ಲಿ ಯೂಟ್ಯೂಬ್ ಚಾನೆಲನ್ನು ವೀಕ್ಷಿಸಿಬಹುದೆಂದು ತಿಳಿಸಿದರು.










