ಹದಗೆಟ್ಟ ರಸ್ತೆಯಲ್ಲಿ ಅನಿವಾರ್ಯ ಸಂಚಾರ
ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
















ಬೆಳ್ಳಾರೆ ಮುಖ್ಯ ರಸ್ತೆಯಿಂದ ಗ್ರಾಮ ಪಂಚಾಯತ್ ಹಳೆಕಟ್ಟಡ ಸಮೀಪದಿಂದ ಸರಕಾರಿ ಆಸ್ಪತ್ರೆ ಕಡೆಗೆ ಹೋಗುವ ರಸ್ತೆ ತೀರಾ ಹೊಂಡಗಳಿಂದ ಕೂಡಿದ್ದು ಡಾಮರು ಕಿತ್ತು ಹೋಗಿದೆ.
ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ.

ಚರಂಡಿ ವ್ಯವಸ್ಥೆಯೂ ಇಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.ಆಂಬ್ಯುಲೆನ್ಸ್ ಓಡಾಟಕ್ಕೂ ತೊಂದರೆಯಾಗಿದ್ದು ಅಸೌಖ್ಯದಿಂದ ಇರುವವರು ಆಸ್ಪತ್ರೆಗೆ ಬರಲೂ ಸಮಸ್ಯೆಯಾಗುತ್ತಿದೆ.
ಜನಪ್ರತಿನಿಧಿಗಳು,ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ರಸ್ತೆ ದುರಸ್ಥಿಗೊಳಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.










