ಇಂದು ಶಾರದೆಯ ವೈಭವದ ಶೋಭಾಯಾತ್ರೆ

ಸೆ.29ರಿಂದ ಆರಂಭಗೊಂಡ ಸುಳ್ಯ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅ.6ರಂದು ರಾತ್ರಿ ತೆರೆಬಿದ್ದಿದೆ. ಇಂದು ಶಾರದೆಯ ವೈಭವದ ಶೋಭಾಯಾತ್ರೆ ನಡೆದು ಪಯಸ್ವಿನಿ ನದಿಯಲ್ಲಿ ಜಲಸ್ತಂಭನ ಮಾಡಲಾಗುವುದು.
















ಅ.6ರಂದು ರಾತ್ರಿ ಸಂಗೀತ ರಸಮಂಜರಿ ಶ್ರುತಿ ಗಾಯನ ಮೆಲೋಡಿಸ್ ಮ್ಯೂಸಿಕ್ ಹಂಗಾಮ ನಡೆಯಿತು. ಸಾವಿರಾರು ಮಂದಿ ಆಗಮಿಸಿ ಈ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.

ಶೋಭಾಯಾತ್ರೆ : ಇಂದು ಶಾರದೆಯ ವೈಭವದ ಶೋಭಾಯಾತ್ರೆ ನಡೆಯುವುದು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೋಭಾಯಾತ್ರೆಗೆ ಚಾಲನೆ ದೊರೆಯುವುದು. ಸುಮಾರು 12 ಕ್ಕಿಂತಲೂ ಅಧಿಕ ಟ್ಯಾಬ್ಲೋ ಗಳು ಶೋಭಾಯಾತ್ರೆ ಗೆ ಮೆರುಗು ನೀಡಲಿವೆ.











