ಕ್ಯಾಂಪ್ಕೋ ಬೆಳ್ಳಾರೆ ಶಾಖೆಯಿಂದ ಸಹಾಯಧನ

0

ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬೆಳ್ಳಾರೆ ಶಾಖೆಯ ಸಕ್ರೀಯ ಸದಸ್ಯರಾದ  ಪ್ರಭಾಕರ ಕಿಲಂಗೋಡಿ ಅವರ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾoಪ್ಕೋ ಸಂಸ್ಥೆಯಿಂದ ಸಹಾಯಧನದ ನೀಡಲಾಯಿತು.

ಸಹಾಯಧನ ಮೊತ್ತ ರೂ.2,00,000/- ವನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ ಮಡ್ತಿಲ ಅ. 07 ರಂದು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ ಕುಮಾರ್ ಶೆಟ್ಟಿ  ಹಾಗೂ ಬೆಳ್ಳಾರೆ ಶಾಖೆಯ ವ್ಯವಸ್ಥಾಪಕರಾದ ಅಶ್ವತ್ಥ ಕುಮಾರ್ ಹಾಗು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.