ಕಲ್ಮಕಾರು : ನಾಯಕತ್ವ ತರಬೇತಿ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ ರಿ. ಸುಳ್ಯ, ಸರ್ವೋದಯ ಯುವಕ ಮಂಡಲ ಕಲ್ಮಕಾರು ಇವುಗಳ ಆಶ್ರಯದಲ್ಲಿ ನಾಯಕತ್ವ ತರಬೇತಿ ಹಾಗೂ ಆರೋಗ್ಯ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಅ. 7 ರಂದು ಕಲ್ಮಕಾರಿನ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೊಲ್ಲಮೊಗ್ರ ಹರಿಹರ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಳ್ಯಪ್ಪ ಗೌಡ ಮಣಿಯಾನಮನೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಭಾ ಅಧ್ಯಕ್ಷತೆಯನ್ನು ಸರ್ವೋದಯ ಯುವಕ ಮಂಡಲದ ಅಧ್ಯಕ್ಷ ಪುನೀತ್ ಕುಮಾರ್ ಕೊಪ್ಪಡ್ಕ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮಿತ್ರ ಮುರಳಿ ನಳಿಯಾರು ಆಗಮಿಸಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಯುವಜನ ಸಂಯುಕ್ತ ಮಂಡಳಿಯ ಗೌರವಾಧ್ಯಕ್ಷ ವಿಜಯಕುಮಾರ್, ಉಬರಡ್ಕ, ಮಂಡಳಿಯ ಅಧ್ಯಕ್ಷ ಪವನ್ ಪಲ್ಲತಡ್ಕ, ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು, ಗೌರವ ಸಲಹೆಗಾರ ಪ್ರವೀಣ್ ಕುಮಾರ್ ಜಯನಗರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಹಾತ್ಮ ಯುವಕ ಮಂಡಲ ಹಾಗೂ ಚೈತನ್ಯ ಯುವತಿ ಮಂಡಲ ಕೊಲ್ಲಮೊಗ್ರ, ಸಚಿನ್ ಕ್ರೀಡಾ ಸಂಘ ಹರಿಹರ ಪಲತಡ್ಕ, ವಿಶ್ವ ಯುವಕ ಮಂಡಲ ಬಾಳುಗೋಡು ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸರ್ವೋದಯ ಯುವಕ ಮಂಡಲದ ಸದಸ್ಯ ಗುರುಪ್ರಸಾದ್ ನಿಡುಬೆ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ, ವರದಿ : ಡಿ. ಹೆಚ್