ಮರ್ಕಂಜ ಗ್ರಾಮ ಪಂಚಾಯತ್ ಮಟ್ಟದ ಪೋಷಣ ಮಾಸಾಚರಣೆ

0

ಮರ್ಕಂಜ ಗ್ರಾಮ ಪಂಚಾಯತ್ ಮಟ್ಟದ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ರೆಂಜಾಳ ಶ್ರೀ ವಿನಾಯಕ ಸಭಾಂಗಣದಲ್ಲಿ ಅ. 6ರಂದು ನಡೆಸಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸದಸ್ಯ ಗೋವಿಂದ ಅಳವುಪಾರೆ ಉದ್ಘಾಟಿಸಿದರು . ಗ್ರಾಮ ಪಂಚಾಯತ್ ಸದಸ್ಯೆ ರಮತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಶಿಶು ಹಾಗೂ ಮಕ್ಕಳ ಆಹಾರ, ಶಿಕ್ಷಣ ಹಾಗೂ ಪೋಷಣೆ, ಮಕ್ಕಳಲ್ಲಿ ಕಂಡುಬರುವ ಅತಿ ತೂಕ ಸಮಸ್ಯೆಗೆ ಕಾರಣಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ವಲಯ ಮೇಲ್ವಿಚಾರಕರಾದ ಶ್ರೀಮತಿ ದೀಪಿಕಾ ಅವರು ಮಾಹಿತಿ ನೀಡಿದರು .ಕಾರ್ಯಕ್ರಮದಲ್ಲಿ ಮಹಾವಿಷ್ಣು ಸ್ತ್ರೀಶಕ್ತಿ ಗೊಂಚಲಿನ ಅಧ್ಯಕ್ಷರು ಪದಾಧಿಕಾರಿಗಳು ಗ್ರಾಮದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು, ಬಾಲ ವಿಕಾಸ ಸಮಿತಿಯ ಅಧ್ಯಕ್ಷರುಗಳು, ಹಾಗೂ ಪೋಷಕರು ಮತ್ತು ಮಕ್ಕಳು , ಕಿಶೋರಿ ಯರು ಹಾಗೂ ಸ್ತ್ರೀಶಕ್ತಿಯ ಸದಸ್ಯರು ಭಾಗವಹಿಸಿದ್ದರು. ಸ್ವಸ್ಥ ನಾರಿ ಸಶಕ್ತ ಪರಿವಾರ ಎಂಬ ಘೋಷಣೆಯೊಂದಿಗೆ .,ಆಗಮಿಸಿದ ನೂರಕ್ಕೂ ಹೆಚ್ಚು ಮಹಿಳೆಯರ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಅಂಗನವಾಡಿ ಪುಟಾಣಿಗಳ ಹಾಗೂ ಕಿಶೋರಿಯರ ಆರೋಗ್ಯ ತಪಾಸಣೆ ನಡೆಸಲಾಯಿತು.