ಅರಂತೋಡು : ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯಾದ ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸೆ. ೨೧ರಂದು ನಡೆಯಿತು.
೨೦೨೫-೨೬ರ ಸಾಲಿನ ಅಧ್ಯಕ್ಷರಾಗಿ ಪಿ.ಬಿ. ದಿವಾಕರ ರೈ, ಉಪಾಧ್ಯಕ್ಷರಾಗಿ ಎ.ಕೆ.ಜತ್ತಪ್ಪ, ಕೋಶಾಧಿಕಾರಿಯಾಗಿ ಕೆ.ಎ. ಸಂಶುದ್ದೀನ್‌ರವರು ಮರು ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಎ. ಅಬ್ದುಲ್ಲ, ಶಾಲಾ ಸಂಚಾಲಕರಾಗಿ ಎ.ಸಿ. ವಸಂತ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಆರ್. ಗಂಗಾಧರ್ ಹಾಗೂ ಯು.ಎಂ. ಶೇಷಗಿರಿ ಆಯ್ಕೆಯಾಗಿದ್ದಾರೆ.