ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕದಲ್ಲಿ ಪಂಚಸಪ್ತತಿ – 2025 ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಮಯೂರಿ ಯುವತಿ ಮಂಡಲ ಚೊಕ್ಕಾಡಿ ಆಶ್ರಯದಲ್ಲಿ ಪಂಚಸಪ್ತತಿ 2025 ಸ್ವಚ್ಛತಾ 75 ದಿನಗಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು.


ಅಭಿಯಾನಕ್ಕೆ ಚಾಲನೆಯನ್ನು ಪ್ರೌಢ ಶಾಲಾ ಮುಖ್ಯೋಪಾಧ್ಯಯರಾದ ಸಂಕೀರ್ಣ ಚೊಕ್ಕಾಡಿಯ ವರು ಕೈ ತೊಳೆಯುವ ವಿಧಾನದ ಬಿತ್ತಿಪತ್ರ ಬಿಡುಗಡೆಯ ಮೂಲಕ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಆರೋಗ್ಯ ಇಲಾಖೆಯ ಸಿ.ಎಚ್.ಓ ಮೋಕ್ಷಿತ ಕೆ, ಕೈ ತೊಳೆಯುವ ವಿಧಾನಗಳು ಮತ್ತು ದೈಹಿಕ ಶುಚಿತ್ವದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷತೆ ನೀಡಿದರು. ಮುಖ್ಯ ಅಥಿತಿಯಾಗಿ ಯುವಜನ ಸಂಯುಕ್ತ ಮಂಡಳಿಯ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಮುರಳಿ ನಳಿಯಾರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ದಿವ್ಯ ಮಡಪ್ಪಾಡಿ ಮತ್ತು ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಭವ್ಯ ಉಪಸ್ಥಿತರಿದ್ದರು.


ಸಭಾ ಅಧ್ಯಕ್ಷತೆಯನ್ನು ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇದರ ಅಧ್ಯಕ್ಷೆ ಶ್ರೀಮತಿ ಹೇಮಾವತಿ ತಂಟೆಪ್ಪಾಡಿ ವಹಿಸಿದ್ದರು. ಶ್ರೀಮತಿ ವೀಣಾ ಪಡ್ಪು ಸ್ವಾಗತಿಸಿ, ಶ್ರೀಮತಿ ನಂದಿನಿ ಚೆನ್ನಮಲೆ ವಂದಿಸಿ, ಶ್ರೀಮತಿ ಹೇಮಲತಾ ಪಡ್ಪು ಕಾರ್ಯಕ್ರಮ ನಿರೂಪಿಸಿದರು.