“ಕಂದ್ರಪ್ಪಾಡಿ: ಪಂಚಸಪ್ತತಿ – 2025” ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ಯುವಜನ ಸಂಯುಕ್ತ ಮಂಡಳಿ ಸುಳ್ಯ ಆಶ್ರಯದಲ್ಲಿ ಹಮ್ಮಿಕೊಂಡಿರುವ “ಪಂಚಸಪ್ತತಿ – 2025” ಎಪ್ಪತ್ತೈದು ದಿನಗಳ ಸ್ವಚ್ಛತಾ ಅಭಿಯಾನಕ್ಕೆ ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಯವರಿಂದ ಇಂದು ಕಂದ್ರಪ್ಪಾಡಿ ಬಸ್ ತಂಗುದಾಣದ ವಠಾರದಲ್ಲಿ ಚಾಲನೆ ನೀಡಲಾಯಿತು. ನಂತರ ಬಸ್ ತಂಗುದಾಣದ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಚಳ್ಳ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ದಿವಾಕರ ಮಂಡೋಡಿ,
ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಸಾಂಸ್ಕೃತಿಕ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ, ಮತ್ತು ಯುವಕಮಂಡಲದ ಕಾರ್ಯದರ್ಶಿ ಪ್ರೀತಮ್ ಮುಂಡೋಡಿ, ಸದಸ್ಯರಾದ ವಿನೋದ್ ಕುಮಾರ್ ಮುಂಡೋಡಿ, ಓಂ ಪ್ರಕಾಶ್ ಮುಂಡೋಡಿ, ಅಶ್ವಿತ್ ಪರಮಲೆ, ಧೀರನ್ ಕುಂಬಾರಕೇರಿ, ರಾಕೇಶ್ ರಾಜ್ ಹಿರಿಯಡ್ಕ, ಜಯಪ್ರಕಾಶ್ ಕಡ್ಲಾರು, ಯೋಗೀಶ್ ಬಾಳೆಗುಡ್ಡೆ, ವಿಜಯ ಮಾಡಬಾಗಿಲು, ಪ್ರದೀಪ್ ಕುತ್ಯಾಳರವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.