ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ನವಚೇತನ ಯುವಕಮಂಡಲ(ರಿ) ಬೊಳುಬೈಲು ಇದರ ವತಿಯಿಂದ ಪಂಚಸಪ್ತತಿ-_2025 75ದಿನಗಳ ಸ್ವಚ್ಚತಾ ಅಭಿಯಾನಕ್ಕೆ ಅ.10ರಂದು ಚಾಲನೆ ನೀಡಲಾಯಿತು.















ಈ ಸಂದರ್ಭದಲ್ಲಿ ಮಾತನಾಡಿದ ಯುವಕಮಂಡಲದ ಅಧ್ಯಕ್ಷ ಪ್ರದೀಪ್ ಬೊಳುಬೈಲು ಈ ಅಭಿಯಾನದ ಅಂಗವಾಗಿ
ಅ.12ರಂದು ಪ್ರಥಮ ಕಾರ್ಯಕ್ರಮವಾಗಿ ಗ್ರಾಮಪಂಚಾಯತ್ ಜಾಲ್ಸೂರು ಇದರ ಸಹಯೋಗದೊಂದಿಗೆ ಗ್ರಾಮವ್ಯಾಪ್ತಿಯ ಪ್ರಯಾಣಿಕರ ಬಸ್ಸುತಂಗುದಾಣಗಳ ಸ್ವಚ್ಚತಾ ಕಾರ್ಯಯವನ್ನು ಮಾಡುವುದಾಗಿ ತಿಳಿಸಿದರು.

ಬ್ಯಾನರ್ ಬಿಡುಗಡೆಯನ್ನು ಯುವಕಮಂಡಲದ ಪೂರ್ವಧ್ಯಕ್ಷ ಗಣೇಶ ಕಾಟೂರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ, ಯುವಕಮಂಡಲದ ಪೂರ್ವಧ್ಯಕ್ಷ ಪ್ರಸಾದ ಕಾಟೂರು, ಸಂಸ್ಥೆಯ ಕಾರ್ಯದರ್ಶಿ ಚಿತ್ತರಂಜನ್ ಕಾಟೂರು, ಕೋಶಾಧಿಕಾರಿ ಭುವನ್ ಬೊಳುಬೈಲು,ಸದಸ್ಯರಾದ ನಿತೀನ್ ಕಾಟೂರು, ಚೆನ್ನಪ್ಪ ಕಾಟೂರು ಉಪಸ್ಥಿತರಿದ್ದರು.










