ಹರಿಪ್ರಸಾದ್ ರಾಮಕುಮೇರಿಯವರ ಚಿಕಿತ್ಸೆಗಾಗಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಂಗ್ರಹಿಸಿದ ಧನ ಸಹಾಯ ಹಸ್ತಾಂತರ

0

ದುರ್ಗಾ ನಾಸಿಕ್ ಬೀಟ್ಸ್ ಬೆಳ್ಳಾರೆ, ವಿರಾಟ್ ಫ್ರೆಂಡ್ಸ್ ಬೆಳ್ಳಾರೆ, ಸೌರವ್ ಬ್ಯಾಡ್ಮಿಂಟನ್ ಕ್ಲಬ್ ಬೆಳ್ಳಾರೆ ಹಾಗೂ ನಾಗರಿಕ ಸೇವಾ ಸಮಿತಿ ಬಾಳಿಲ ಇದರ ಸಹಯೋಗದೊಂದಿಗೆ ಬಾಳಿಲ ಗ್ರಾಮದ ರಾಮಕುಮೇರಿ ನಿವಾಸಿ ಹರಿಪ್ರಸಾದ್ ಇವರು ಅಪ್ಲಾಸ್ಟಿಕ್ ಅನಾಮಿಯ ಎಂಬ ಕಾಯಿಲೆಯಿಂದ ಬಳಲುತಿದ್ದು ವ್ಯೆದ್ಯರು ಸುಮಾರು 20 ರಿಂದ 25 ಲಕ್ಷ ಚಿಕಿತ್ಸೆ ವೆಚ್ಚ ತಗುಲುವುದು ಎಂದು ತಿಳಿಸಿರುತ್ತಾರೆ. ಆದ್ದರಿಂದ ಸಂಘದ ಸದಸ್ಯರಿಂದ ವಿವಿಧ ವೇಷಭೂಷಣ ಮೂಲಕ ಬೆಳ್ಳಾರೆ ಹಾಗೂ ಕಡಬ ಪಟ್ಟಣಗಳಲ್ಲಿ ನಿಧಿ ಸಂಗ್ರಹದ ಮೂಲಕ ಸಂಗ್ರಹಿಸಿದ 1,05,500 ರೂಪಾಯಿಯನ್ನು ದಕ್ಷಿಣ ಕನ್ನಡ ಮಾಜಿ ಸಂಸದರಾದ ನಳೀನ್ ಕುಮಾರ್ ಕಟೀಲ್ ಇವರು ಶ್ರೀ ರಾಮಕುಮೇರಿ ಹರಿಪ್ರಸಾದ್ ಇವರಿಗೆ ಗಣ್ಯರ ಸಮ್ಮುಖದಲ್ಲಿ ಹಸ್ತಾoತರಿಸಿದರು. ಈ ಸಂದರ್ಭದಲ್ಲಿ ಗಣ್ಯರು,ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಧನ ಸಹಾಯ ಮಾಡಿ ಸಹಕರಿಸಿದ ಕಡಬ ಮತ್ತು ಬೆಳ್ಳಾರೆ ಭಾಗದ ಸಹೃದಯಿ ಬಂಧುಗಳಿಗೂ ವಿಶೇಷ ವಾದನದ ಮೂಲಕ ಸಹಕರಿಸಿದ ನಾಸಿಕ್ ಬೀಟ್ಸ್ ನ ಸದಸ್ಯರಿಗೂ ಹಾಗೂ ಅನ್ಯಾನ್ಯಾ ವೇಷ ಧರಿಸಿ ಸಹಕರಿಸಿದವರಿಗೂ ಸಂಘಟಕರ ವತಿಯಿಂದ ಹೃತ್ಪೂರ್ವಕ ಧನ್ಯವಾದ ಸಲ್ಲಿಸಲಾಯಿತು.