
ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಐವರ್ನಾಡು, ಸಮಗ್ರ ಸಂಜೀವಿನಿ ಒಕ್ಕೂಟ ಇದರ ಆಶ್ರಯದಲ್ಲಿ ಕೌಶಲ್ಯ ತರಬೇತಿ ಶಿಬಿರ ಅ.9 ರಿಂದ 11ರವರೆಗೆ ಮತ್ತು ಅಕ್ಟೋಬರ್ 16,17, 18ರವರೆಗೆ ನಡೆಯಲಿದ್ದು, ಇದರ ಉದ್ಘಾಟನೆ ಅ. 10ರಂದು ನಡೆಯಿತು.

ಐವರ್ನಾಡು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು.















ಕಾಲೇಜಿನ ಪ್ರಾಂಶುಪಾಲರಾದ
ಡಾ. ರುದ್ರಕುಮಾರ್ ಎಂ.ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ” ಈ ಕೌಶಲ್ಯ ತರಬೇತಿಯು ಗ್ರಾಮೀಣ ಜನರಿಗೆ ತುಂಬಾ ಉಪಯುಕ್ತವಾದಂತಹ ಕಾರ್ಯಕ್ರಮ ಇದರಿಂದ ಇಂದು ಸಣ್ಣ ಪ್ರಮಾಣದಲ್ಲಿ ತಯಾರಿಸಿ ಮುಂದೊಂದು ದಿನ ಉದ್ದಿಮೆಯನ್ನು ಮಾಡುವಂತಾಗಲಿ ” ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮಪ್ರಸಾದ್ ಎಂ.ಆರ್, ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್. ಎನ್.ಮನ್ಮಥ, ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ
ಶೋಭಾ. ಎ, ಸುಳ್ಯ ತಾ.ಪಂ. NRLM ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ, ಕಾಲೇಜಿನ ಗ್ರಂಥ ಪಾಲಕರಾದ ಡಾ. ಉಮೇಶ್, ಐವರ್ನಾಡು ಗ್ರಾ.ಪಂ. ಸದಸ್ಯೆ ಶ್ರೀಮತಿ ಸುಜಾತ ಪವಿತ್ರಮಜಲು ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಬಿರದಲ್ಲಿ ಸೋಪ್ ತಯಾರಿಕೆ ಬಗ್ಗೆ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಪೆರಾಜೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಆಶಾ ಕೊಳಂಗಾಯ ಸೋಪ್ ತಯಾರಿಕೆಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಾವಿತ್ರಿ ದೊಡ್ಡಮನೆ ಉಪಸ್ಥಿತರಿದ್ದರು. ತರಬೇತಿಯಲ್ಲಿ ಗ್ರಾಮಪಂಚಾಯತ್ ಸದಸ್ಯರು, ಸಂಜೀವಿನಿ ಸಂಘದ ಸದಸ್ಯರು, ಪದಾಧಿಕಾರಿಗಳು, ಸಿಬ್ಬಂದಿಗಳು ಭಾಗಹಿಸಿದ್ದರು.
ಜಸ್ವಂತ್. ಎ. ಡಿ ಸ್ವಾಗತಿಸಿ, ಅಮಿತಾ ಲಾವಂತಡ್ಕ ವಂದಿಸಿದರು. ಸಾತ್ವಿಕ್ ಪಿ.ವಿ ಕಾರ್ಯಕ್ರಮವನ್ನು ನಿರೂಪಿಸಿದರು.










