ವೇ.ಮೂ. ಶ್ರೀಕೃಷ್ಣ ಭಟ್ಟ ವಡ್ಯ ಮತ್ತು ವೇ.ಮೂ. ಶಂಭು ಭಟ್ಟ ಚಾವಡಿಬಾಗಿಲುರವರಿಗೆ ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ಸ್ಮಾರಕ ವೈದಿಕ ಪ್ರಶಸ್ತಿ ಪ್ರದಾನ

0

ಚೊಕ್ಕಾಡಿ: ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ನೆನಪಿನ ವೈದಿಕ ಪ್ರಶಸ್ತಿಯನ್ನು ಅ. 11ರಂದು ವೇ.ಮೂ. ಶ್ರೀಕೃಷ್ಣ ಭಟ್ಟ ವಡ್ಯ ಮತ್ತು ವೇ.ಮೂ. ಶಂಭು ಭಟ್ಟ ಚಾವಡಿಬಾಗಿಲುರವರಿಗೆ ಪ್ರದಾನಮಾಡಲಾಯಿತು.


ಹಿರಿಯರಾದ ಕೃಷ್ಣಮೂರ್ತಿ ನೇಣಾರು ಮತ್ತು ಚಂದ್ರಶೇಖರ ಭಟ್ ಕುಟುಂಬುಡೇಲು ಪ್ರಶಸ್ತಿ ಪ್ರದಾನಗೈದು ಶುಭ ಹಾರೈಸಿದರು. ಸನ್ಮಾನಿತರ ಶಂಭು ಭಟ್ಟರು ಸನ್ಮಾನಕ್ಕೆ ಉತ್ತರವಾಗಿ ಕೃತಜ್ಞತಾ ನುಡಿಗಳನ್ನಾಡಿದರು. ಉಪಾಸನಾ ಮನೆಯವರಾದ ವೇ.ಮೂ. ಮಹೇಶ್ ಚೂಂತಾರು, ಡಾ. ಮುರಲೀಮೋಹನ್ ಚೂಂತಾರು, ಗಣೇಶ್ ಸುಂದರ್ ಮಂಗಳೂರು ಸೇರಿದಂತೆ ಕುಟುಂಬಸ್ಥರು, ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಗಂಗಾ ಮಹೇಶ್ ಮತ್ತು ಶ್ರೀಮತಿ ಗೀತಾ ದೇವಿ ಸನ್ಮಾನಪತ್ರ ವಾಚಿಸಿದರು.